ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಾರಿತೋಷಕ ಪಡೆದ 2 ವರ್ಷದ ಬಾಲಕಿ
ಬಾಗೇಪಲ್ಲಿ, ಮಾ.8: ಗ್ರಾಮೀಣ ಭಾಗದ ಪುಟ್ಟ ಹಳ್ಳಿಯಲ್ಲಿರುವ 2 ವರ್ಷದ ಪುಟಾಣಿ ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್ 2021 ಪಾರಿತೋಷಕ ಪಡೆದು ಸಾಧನೆ ಮಾಡಿದ್ದಾಳೆ.
ತಾಲೂಕಿನ ಮಾರಗಾನುಕುಂಟೆ ಗ್ರಾಮದ ಕೆ.ವೈಷ್ಣವಿ ಮತ್ತು ಅರ್ಜುನ್ ದಂಪತಿಗಳ ಮಗಳಾದ ಕೆ.ಎ.ಆದ್ಯ (2) ಮೂವತ್ತು ದೇಶಗಳ ರಾಷ್ಟ್ರ ಧ್ವಜಗಳನ್ನು, ವಿವಿಧ ಬಗೆಯ ಪಕ್ಷಿ ಮತ್ತು ಪ್ರಾಣಿಗಳನ್ನು, ಧಶಾವತಾರ, ಗಣಿತ ಚಿಹ್ನೆಗಳು, ದೇಹದ ಅಂಗಾಂಗಗಳು ಪೋಟೊ ನೋಡಿದ ತಕ್ಷಣವೇ ಗುರುತಿಸಿ ಅವುಗಳ ಸಂಪೂರ್ಣ ಹೆಸರುಗಳನ್ನು ಕ್ಷಣಾರ್ಧದಲ್ಲಿ ಹೇಳುತ್ತಾಳೆ. ಯಾವುದೇ ರೀತಿಯ ಪುಸ್ತಕಗಳನ್ನು ನೋಡದೆ ಶ್ಲೋಕಗಳನ್ನು ಪರಿಪೂರ್ಣವಾಗಿ ಪಠಿಸುತ್ತಾಳೆ.
ಬಾಲಕಿಯ ಸಾಧನೆಗಳ ಸಂಪೂರ್ಣ ವಿಡಿಯೋಗಳನ್ನು ದಿಲ್ಲಿಯಯಲ್ಲಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಪರಿಶೀಲಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್-2021 ನೇ ಸಾಲಿನ ಪದಕವನ್ನು ಘೋಷಣೆ ಮಾಡಿದ್ದಾರೆ.
Next Story