ಅಪ್ಪ-ಅಮ್ಮನನ್ನು ಬ್ಲಾಕ್ ಮೇಲ್ ಮಾಡಿ ಏನೇನೋ ಹೇಳಿಸುತ್ತಿದ್ದಾರೆ: 5ನೇ ವಿಡಿಯೋದಲ್ಲಿ ಯುವತಿ ಆರೋಪ
ಬೆಂಗಳೂರು, ಮಾ.27: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಯುವತಿಯ 5ನೆ ವಿಡಿಯೋ ಶನಿವಾರ ರಾತ್ರಿ ಬಿಡುಗಡೆಯಾಗಿದ್ದು, ನನ್ನ ಅಪ್ಪ-ಅಮ್ಮನನ್ನು ಬ್ಲಾಕ್ ಮೇಲ್ ಮಾಡಿ ಏನೇನೋ ಹೇಳಿಸುತ್ತಿದ್ದಾರೆ ಎಂದಿದ್ದಾರೆ.
‘ನಮ್ಮ ಅಪ್ಪ, ಅಮ್ಮನಿಗೆ ಏನೂ ಗೊತ್ತೆ ಇಲ್ಲ. ಅವರನ್ನು ಕರೆದುಕೊಂಡು ಬಂದು, ಅವರ ಮೇಲೆ ಪ್ರಭಾವ ಬೀರಿ, ಬ್ಲಾಕ್ಮೇಲ್ ಮಾಡಿ ಏನೇನೋ ಹೇಳಿಕೆಯನ್ನು ನೀಡಿಸುತ್ತಿದ್ದಾರೆ. ನಿಜವಾದ ಸಂತ್ರಸ್ತೆ ನಾನಾಗಿದ್ದೇನೆ. ಎಸ್ಐಟಿ ಎದುರು ಬಂದು ಹೇಳಿಕೆ ನೀಡಲು ನನಗೆ ಭಯವಾಗುತ್ತಿದೆ ಎಂದು ಆಕೆ ತಿಳಿಸಿದ್ದಾಳೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಬಸವರಾಜ ಬೊಮ್ಮಾಯಿ, ರಮೇಶ್ಕುಮಾರ್ ಅವರು ನನ್ನ ರಕ್ಷಣೆಗೆ ಬರಬೇಕು. ಈ ಕೇಸನ್ನು ಬೇರೆ ರೀತಿಯಾಗಿ ಪರಿವರ್ತನೆ ಮಾಡುತ್ತಿದ್ದಾರೆ. ನಾನು ನ್ಯಾಯಾಧೀಶರ ಎದುರು ಬಂದು ಹೇಳಿಕೆ ನೀಡಲು ಅವಕಾಶ ಮಾಡಿಕೊಡಿ ಎಂದು ಸಂತ್ರಸ್ತ ಯುವತಿ ಮನವಿ ಮಾಡಿದ್ದಾಳೆ.
Next Story