ಎ.7ರಂದು ಪರೀಕ್ಷಾ ಪೇ ಚರ್ಚಾ ನಡೆಸಲಿರುವ ಪ್ರಧಾನಿ ಮೋದಿ
ಬೆಂಗಳೂರು, ಎ.5: ವಿದ್ಯಾರ್ಥಿಗಳು, ಬೋಧಕರು ಮತ್ತು ಪೋಷಕರ ಜೊತೆ ಎಪ್ರಿಲ್ 7ರಂದು ಸಂಜೆ 7 ಗಂಟೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ‘ಪರೀಕ್ಷಾ ಪೇ ಚರ್ಚಾ 2021 ಸಂವಾದ’ ನಡೆಯಲಿದೆ.
ಅಂದು ಪ್ರಧಾನಮಂತ್ರಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರೀಕ್ಷಾ ಪೇ ಚರ್ಚಾ ಸಂವಾದ ನಡೆಸಲಿದ್ದಾರೆ. ಈ ಸಂವಾದವು ವಿಶ್ವದಾದ್ಯಂತ ನಡೆಯಲಿದೆ.
ತಾವು ಬರೆದಿರುವ ಹೊಸ ಆವೃತ್ತಿಯ ಎಕ್ಸಾಮ್ ವಾರಿಯರ್ಸ್ ಕೃತಿಯಲ್ಲಿ ಹಲವು ಆಸಕ್ತಿದಾಯಕ ಪ್ರಶ್ನೆಗಳು, ವಿಷಯಗಳು, ಸ್ಮರಣೀಯ ಚರ್ಚೆಗಳನ್ನು ಸೇರ್ಪಡೆ ಮಾಡಲಾಗಿದೆ. ಹೊಸ ಆವೃತ್ತಿಯ ಕೃತಿಯು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದೆ ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.
Next Story