ಕೋರೋನ ಸೋಂಕಿತ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
ಮಂಡ್ಯ, ಮೇ6: ಕೋರೋನ ಸೋಂಕಿತ ವ್ಯಕ್ತಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಉಮ್ಮಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಮಾರು 60 ವಯಸ್ಸಿನ ವ್ಯಕ್ತಿ ಕೊರೋನ ಪಾಸಿಟಿವ್ ನಿಂದ ಹೋಂ ಐಸೋಲೇಷನಲ್ಲಿದ್ದರು.
ಗುರುವಾರ ಬೆಳಗ್ಗೆ ಮನೆಯ ಪಕ್ಷದ ಜಮೀನಿನ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story