ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹೊರತುಪಡಿಸಿ ಅವರ ಕುಟುಂಬದ ಎಲ್ಲರಿಗೂ ಕೊರೋನ ದೃಢ
ಮೈಸೂರು, ಮೇ 15: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಇಡೀ ಕುಟುಂಬಕ್ಕೆ ಕೋವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರದಿ ಮಾತ್ರ ನೆಗೆಟಿವ್ ಬಂದಿದೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಬಿಟ್ಟು ಅವರ ಪತಿ, ತಂದೆ, ತಾಯಿ, ಮಾವ, ಅತ್ತೆಗೆ ಕೊರೋನ ಸೋಂಕು ಪಾಸಿಟಿವ್ ಬಂದಿದ್ದು, ಸಿಂಧೂರಿ ಅವರಿಗೆ ನೆಗೆಟಿವ್ ವರದಿ ಬಂದಿದೆ.
ಸೋಂಕು ದೃಢಪಟ್ಟ ಎಲ್ಲರೂ ಆರೋಗ್ಯವಾಗಿದ್ದು, ಹೋಂ ಐಸೂಲೇಷನ್ ನಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.
Next Story