ವಿದೇಶಿಗರಿಗೆ ಲಸಿಕೆ ನೀಡಲು ತೋರಿರುವ ಉತ್ಸಾಹ ನಮ್ಮ ದೇಶದ ಜನರಿಗೆ ನೀಡಲು ಯಾಕಿಲ್ಲ?: ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ (Photo: Facebook)
ಬೆಂಗಳೂರು, ಮೇ 17: `ಪ್ರಧಾನಿ ಮೋದಿ ಅವರೇ, ದೇಶದ ಜನತೆಗೆ ನೀಡಿರುವ ಲಸಿಕೆಗಿಂತ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನ ವಿದೇಶಗಳಿಗೆ ಪೂರೈಸಿದ್ದೇವೆ ಎಂದು ಭಾರತದ ರಾಯಭಾರಿ ಕೆ.ನಾಗರಾಜ ನಾಯ್ಡು ಅವರು ವಿಶ್ವಸಂಸ್ಥೆಗೆ ತಿಳಿಸಿದ್ದಾರೆ. ವಿದೇಶಿಗರಿಗೆ ಲಸಿಕೆ ನೀಡಲು ತೋರಿರುವ ಉತ್ಸಾಹ, ನಮ್ಮ ದೇಶದ ಜನರಿಗೆ ಲಸಿಕೆ ನೀಡಲು ಯಾಕಿಲ್ಲ? ಇದ್ಯಾವ ದೇಶಭಕ್ತಿ?' ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸೋಮವಾರ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಕೋವಿಡ್ ಲಸಿಕೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪ್ರತಿನಿತ್ಯ ದೊಡ್ಡ ಸಂಖ್ಯೆಯಲ್ಲಿ 18ರಿಂದ 45 ವರ್ಷದೊಳಗಿನ ಜನರ ತೆರಳುತ್ತಿದ್ದು, ಆರೋಗ್ಯ ಕೇಂದ್ರಗಳ ಸಿಬ್ಬಂದಿ ಲಸಿಕೆ ಇಲ್ಲ. ಇದೀಗ ಎರಡನೆ 45 ವರ್ಷ ಮೇಲ್ಪಟ್ಟವರಿಗೆ ಎರಡನೆ ಡೋಸ್ ಮಾತ್ರ ಹಾಕುತ್ತೇವೆಂದು ಹೇಳುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ವಿದೇಶಕ್ಕೆ ಲಸಿಕೆ ಪೂರೈಕೆ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಮಾನ್ಯ @narendramodi ಅವರೇ,
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 17, 2021
ದೇಶದ ಜನತೆಗೆ ನೀಡಿರುವ ಲಸಿಕೆಗಿಂತ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನ ವಿದೇಶಗಳಿಗೆ ಪೂರೈಸಿದ್ದೇವೆ ಎಂದು ಭಾರತದ ರಾಯಭಾರಿ ಕೆ. ನಾಗರಾಜ ನಾಯ್ಡು ಅವರು ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.
ವಿದೇಶಿಗರಿಗೆ ಲಸಿಕೆ ನೀಡಲು ತೋರಿರುವ ಉತ್ಸಾಹ, ನಮ್ಮ ದೇಶದ ಜನರಿಗೆ ಲಸಿಕೆ ನೀಡಲು ಯಾಕಿಲ್ಲ? ಇದ್ಯಾವ ದೇಶಭಕ್ತಿ? pic.twitter.com/oFBa00R2mm