ಕಲಬುರಗಿ ಹೈಕೋರ್ಟ್ ವ್ಯಾಪ್ತಿಯಲ್ಲಿ 54 ವಕೀಲರು ಕೊರೋನಗೆ ಬಲಿ
ಕಲಬುರಗಿ, ಮೇ 24: ರಾಜ್ಯಾದ್ಯಂತ ಕೊರೋನ ಸೋಂಕು ದಿನಂಪ್ರತಿ ಹೆಚ್ಚಳವಾಗುತ್ತಿದ್ದು, ಈ ಸೋಂಕಿಗೆ ಕಲಬುರಗಿ ಹೈಕೋರ್ಟ್ ವ್ಯಾಪ್ತಿಯಲ್ಲಿ ಒಂದೂವರೆ ತಿಂಗಳಲ್ಲಿ 54 ವಕೀಲರು ಬಲಿಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.
ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳನ್ನು ಒಳಗೊಂಡ ಕಲಬುರಗಿ ಹೈಕೋರ್ಟ್ ವ್ಯಾಪ್ತಿಯಲ್ಲಿ ಕಳೆದ ಎಪ್ರಿಲ್ 1 ರಿಂದ ಮೇ 18ರ ವರೆಗೆ ಒಟ್ಟು 54 ವಕೀಲರು ಕೊರೋನದಿಂದ ಮೃತಪಟ್ಟಿದ್ದಾರೆ.
ಇದಲ್ಲದೆ ವಕೀಲರ ಕುಟುಂಬ ಸದಸ್ಯರ ಪೈಕಿ 50 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮೃತರಲ್ಲಿ ಮದ್ಯ ವಯಸ್ಕ ವಕೀಲರ ಸಂಖ್ಯೆಯೇ ಹೆಚ್ಚು. ಇನ್ನು ಹಲವು ವಕೀಲರಿಗೂ ಕೊರೋನ ಸೋಂಕು ತಗುಲಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story