ಕರ್ನಾಟಕದ ಕೈ ತಪ್ಪಲಿದೆಯೇ 'ಕೆಎಸ್‌ಆರ್‌ಟಿಸಿ' ಟ್ರೇಡ್‌ಮಾರ್ಕ್ ? | Vartha Bharati- ವಾರ್ತಾ ಭಾರತಿ

--

ಕೇರಳದ ಪರ ತೀರ್ಪು ನೀಡಿದ ಕೇಂದ್ರ ಟ್ರೇಡ್‌ಮಾರ್ಕ್ ನೋಂದಣಿ ಸಂಸ್ಥೆ

ಕರ್ನಾಟಕದ ಕೈ ತಪ್ಪಲಿದೆಯೇ 'ಕೆಎಸ್‌ಆರ್‌ಟಿಸಿ' ಟ್ರೇಡ್‌ಮಾರ್ಕ್ ?

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜೂ.2: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಗಳೆರಡೂ ಬಳಸುತ್ತಿದ್ದ ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಅನ್ನು ಇನ್ನು ಕೇರಳ ಮಾತ್ರ ಬಳಸಿಕೊಳ್ಳಬಹುದಾಗಿದೆಯೆಂದು ಮಲಯಾಳ ಮನೋರಮಾ ಸುದ್ದಿ ಸಂಸ್ಥೆ ಬುಧವಾರ ವರದಿ ಮಾಡಿದೆ.

ಏಳು ವರ್ಷಗಳ ಕಾಲದ ಕಾನೂನು ಹೋರಾಟದ ಬಳಿಕ ಕೆಎಸ್‌ಆರ್‌ಟಿಸಿ ಟ್ರೇಡ್‌ಮಾರ್ಕ್ ಅನ್ನು ತಾನು ಮಾತ್ರ ಬಳಸಬಹುದೆಂಬ ಕರ್ನಾಟಕದ ವಾದವನ್ನು ಕೇಂದ್ರ ಟ್ರೇಡ್ ಮಾರ್ಕ್ ನೋಂದಣಿ ಸಂಸ್ಥೆ ತಿರಸ್ಕರಿಸಿದೆಯೆಂದು ಅದು ವರದಿಯಲ್ಲಿ ತಿಳಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಕೇರಳ ರಸ್ತೆ ಸಾರಿಗೆ ನಿಗಮ ಇವೆರಡೂ ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಬಳಸಿಕೊಳ್ಳುತ್ತಿರುವ ಬಗ್ಗೆ ಎರಡೂ ರಾಜ್ಯಗಳ ನಡುವೆ ಹಲವು ವರ್ಷಗಳಿಂದ ವಿವಾದ ತಲೆದೋರಿತ್ತು. ಆನ್‌ಲೈನ್ ಮೂಲಕ ಕೇರಳ ರಸ್ತೆ ಸಾರಿಗೆ ನಿಗಮದ ಬಸ್ ಟಿಕೆಟ್ ಕಾದಿರಿಸುವವರಿಗೆ ಕರ್ನಾಟಕದ ಕೆಎಸ್‌ಆರ್‌ಟಿಸಿ ಬಸ್ ಸೇವೆಯ ವಿವರಗಳು ಲಭ್ಯವಾಗುತ್ತಿದ್ದು, ಗೊಂದಲಕ್ಕೆ ಕಾರಣವಾಗುತ್ತಿದ್ದುದಾಗಿ ಕೇರಳದ ಆಕ್ಷೇಪವಾಗಿತ್ತು.

2014ರಲ್ಲಿ ಕೇಂದ್ರ ಟ್ರೇಡ್ ಮಾರ್ಕ್ ನೋಂದಣಿ ಸಂಸ್ಥೆಯ ಮೆಟ್ಟಲೇರಿದ ಕರ್ನಾಟಕವು ಕೆಎಸ್‌ಆರ್‌ಟಿಸಿ ಎಂಬ ಟ್ರೇಡ್‌ಮಾರ್ಕ್ ಅನ್ನು ತಾನು ಮಾತ್ರವೇ ಬಳಸಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿತ್ತು. ಇದಕ್ಕೆ ಪ್ರತಿಯಾಗಿ ಕೇರಳವು ಪ್ರತಿದೂರು ಸಲ್ಲಿಸಿದ್ದುದು ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿತ್ತು.

1937ರಲ್ಲಿ ತಿರುವಾಂಕೂರು ರಾಜಮನೆತನವು ಕೇರಳದಲ್ಲಿ ಸಾರ್ವಜನಿಕ ರಸ್ತೆ ಸಾರಿಗೆ ಸಂಸ್ಥೆಯನ್ನು ಆರಂಭಿಸಿತ್ತು. ಕೇರಳ ರಾಜ್ಯ ರೂಪುಗೊಂಡ ಬಳಿಕ 1965ರಲ್ಲಿ ಅದಕ್ಕೆ ಕೆಎಸ್‌ಆರ್‌ಟಿಸಿ ಎಂದು ನಾಮಕರಣ ಮಾಡಲಾಯಿತು. ಕರ್ನಾಟಕವು 1973ರಿಂದ ತನ್ನ ಸಾರ್ವಜನಿಕ ರಸ್ತೆ ಸಾರಿಗೆ ಸಂಸ್ಥೆಗೆ ಕೆಎಸ್‌ಆರ್‌ಟಿಸಿ ಎಂಬ ಟ್ರೇಡ್‌ಮಾರ್ಕ್ ಬಳಸಲು ಆರಂಭಿಸಿತ್ತೆಂದು ಕೇರಳವು ಟ್ರೇಡ್‌ಮಾರ್ಕ್ ನೋಂದಣಿ ಸಂಸ್ಥೆಗೆ ಮನವರಿಕೆ ಮಾಡಿಕೊಡುವ ಮೂಲಕ ಕಾನೂನು ಸಮರದಲ್ಲಿ ಯಶಸ್ವಿಯಾಗಿದೆಯೆಂದು ಮಲಯಾಳಂ ಮನೋರಮಾ ಸುದ್ದಿಸಂಸ್ಥೆ ವರದಿ ಮಾಡಿದೆ.

ನೂತನ ಆದೇಶದ ಪ್ರಕಾರ ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಎಂಬ ಟ್ರೇಡ್‌ಮಾರ್ಕ್ ಅನ್ನು ಕೇರಳವಲ್ಲದೆ ಮತ್ತ್ಯಾರೂ ಬಳಸುವಂತಿಲ್ಲವೆಂದು ಮನೋರಮಾ ಸುದ್ದಿ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top