ಚಿಕನ್ ಅಂಗಡಿಯಲ್ಲಿಯೇ ಮದ್ಯ ಮಾರಾಟ ಮಾಡುತ್ತಿದ್ದ ಆರೋಪ: ವ್ಯಕ್ತಿಯ ಬಂಧನ
ಶಿವಮೊಗ್ಗ, ಜೂ.11: ಚಿಕನ್ ಅಂಗಡಿಯಲ್ಲಿಯೇ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಚಂದ್ರು ಬಂಧಿತ ಆರೋಪಿ. ಇವರು ಕಳೆದ ಕೆಲ ದಿನಗಳಿಂದ ಚಿಕನ್ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿದ ತೀರ್ಥಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Next Story