ಮಡಿಕೇರಿ: ಸೈನಿಕ ಕುಟುಂಬದ ಮೇಲೆ ಹಲ್ಲೆ ಆರೋಪ; ಮೂವರ ಬಂಧನ
ಮಡಿಕೇರಿ ಜು.27 : ಮಡಿಕೇರಿ ಹೊರ ವಲಯದಲ್ಲಿ ರವಿವಾರ ರಾತ್ರಿ ಯೋಧ ಹಾಗೂ ಆತನ ಕುಟುಂಬದವರ ಮೇಲೆ ಹಲ್ಲೆ ನಡೆದ ಆರೋಪದಲ್ಲಿ ಮೂವರನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸುಂಟಿಕೊಪ್ಪ ನಿವಾಸಿ ಇಸಾಕ್ ಖಾನ್, ರಫೀಕ್ ಖಾನ್ ಹಾಗೂ ನಾಸಿರ್ ಎಂಬುವವರೇ ಬಂಧಿತ ಆರೋಪಿಗಳು. ಈ ಹಲ್ಲೆ ಪ್ರಕರಣದಲ್ಲಿ ಯೋಧ ಅಶೋಕ್ ಕುಮಾರ್ ಅವರ ಪತ್ನಿ ಯೋಗಿತ ಹಾಗೂ ತಂದೆ ಪೊನ್ನಪ್ಪ ಅವರಿಗೆ ಗಾಯಗಳಾಗಿತ್ತು. ಅಲ್ಲದೆ ಚಿನ್ನಾಭರಣಗಳನ್ನು ಕಸಿದು ಪರಾರಿಯಾಗಿರುವ ಬಗ್ಗೆ ಆರೋಪಿಸಲಾಗಿತ್ತು. ಪ್ರಕರಣದ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Next Story