ಹಾಸನ: ದೊಡಕೊಂಡಗುಳ ಸಮೀಪ ಭೂಕಂಪನದ ಅನುಭವ; ಆತಂಕದಲ್ಲಿ ಜನತೆ
ಆತಂಕದಿಂದ ಹೆದರಿ ಹೊರಗೆ ಬಂದ ಸ್ಥಳೀಯರು
ಹಾಸನ: ನಗರದ ಸಮೀಪ ಇರುವ ತಾಲೂಕಿನ ದೊಡ್ಡಕೊಂಡಗುಳ ಗ್ರಾಮದಲ್ಲಿ ಶುಕ್ರವಾರದಂದು ಸಂಜೆ ಸುಮಾರು 5:10ರ ಸಮಯದಲ್ಲಿ ಭೂಕಂಪವಾದ ಅನುಭವವಾಗಿದೆ.
ಸಂಜೆ ಸಮಯ ಸುಮಾರು 5:10ರ ವೇಳೆ ಭೂಮಿಯಲ್ಲಿ ನಡುಗಿದ ಅನುಭವವಾದಂತೆ ಗ್ರಾಮದ ಕೆಲವರು ಆತಂಕದಿಂದ ಹೆದರಿ ಹೊರಗೆ ಬಂದಿದ್ದಾರೆ.
4 ರಿಂದ 5 ಸೆಕೆಂಡುಗಳ ಕಾಲ ಭೂಕಂಪನದ ಅನುಭವವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಇಂತಹ ಅನುಭವವಾಗಿತ್ತು ಎಂದು ಸ್ಥಳೀಯರು ತಿಳಿಸಿದರು.
Next Story