ವಾಣಿಜ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟ
ಬೆಂಗಳೂರು, ಸೆ. 18: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಇತರೆ ಪರೀಕ್ಷೆಗಳು), ಮಲ್ಲೇಶ್ವರಂ ವತಿಯಿಂದ 2021ರ ಎಪ್ರಿಲ್/ಮೇನಲ್ಲಿ ನಡೆದ ವಾಣಿಜ್ಯ ಪರೀಕ್ಷೆಯ ಫಲಿತಾಂಶವನ್ನು ಸೆ.18ರಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ಸೈಟ್ https://sslc.karnataka.gov.in ನಲ್ಲಿ ಪ್ರಕಟಿಸಲಾಗಿದೆ.
ಸಂಬಂಧಿಸಿದ ಶಾಲೆಗಳ ಲಾಗಿನ್ನಲ್ಲಿ ಈಗಾಗಲೇ ಫಲಿತಾಂಶ ಪಟ್ಟಿಯನ್ನು ಅಪ್ಲೋಡ್ ಮಾಡಲಾಗಿದ್ದು, ಸಂಬಂಧಿಸಿದ ವಾಣಿಜ್ಯ ಸಂಸ್ಥೆಯವರು ಮಂಡಳಿಯ ಜಾಲತಾಣದ ಶಾಲಾ ಲಾಗಿನ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಆಯಾ ವಾಣಿಜ್ಯ ಸಂಸ್ಥೆಗಳ ಪ್ರಕಟಣಾ ಫಲಕದಲ್ಲಿ ಪ್ರಕಟಿಸಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Next Story