ದಾವಣಗೆರೆ ;14 ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಮೃತ್ಯು: ಡೆಂಗ್ಯೂ ಶಂಕೆ
ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದಲ್ಲಿ ಶಂಕಿತ ಡೆಂಗ್ಯೂ ಜ್ವರದಿಂದ 14 ವರ್ಷದ ಬಾಲಕಿಯೊಬ್ಬಳು ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೆ. 20 ರಂದು ಮೃತಪಟ್ಟಿದ್ದಾರೆ.
ಬಾಲಕಿಗೆ ಸೆ. 11 ರಂದು ಶೀತ, ಜ್ವರ ಕಾಣಿಸಿಕೊಂಡಿದ್ದು , ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರ. ಕೋವಿಡ್ ಪರೀಕ್ಷೆ ಮಾಡಿದ್ದು ನೆಗೆಟಿವ್ ಇದೆ. ಜ್ವರ ಉಲ್ಬಣಗೊಂಡಿದ್ದರಿಂದ ಚನ್ನಗಿರಿ ಖಾಸಗಿ ಕ್ಲಿನಿಕ್ ಮತ್ತು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಡೆಂಗ್ಯೂ ಗಾಗಿ ಪರೀಕ್ಷೆ ಮಾಡಲಾಗಿದ್ದು ಎನ್. ಎಸ್ -1 ಆಂಟಿಜನ್ ಪರೀಕ್ಷೆ ಪಾಸಿಟಿವ್ ಬಂದಿದೆ.. ಆದರೆ ಮಾರ್ಗಸೂಚಿಗಳ ಪ್ರಕಾರ ಈ ಪರೀಕ್ಷೆಯು ನಿರ್ಣಾಯಕ ಅಲ್ಲದೆ ಇರುವುದರಿಂದ ಈ ಪ್ರಕರಣವನ್ನು 'ಶಂಕಿತ ಡೆಂಗೀ ಮರಣ' ಎಂದು ಪರಿಗಣಿಸಿದ್ದು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story