ಕುಮಾರಸ್ವಾಮಿ ಎಷ್ಟು ಜನ ಮುಸ್ಲಿಮರನ್ನು ಶಾಸಕರನ್ನಾಗಿ ಮಾಡಿದ್ದಾರೆ: ಝಮೀರ್ ಅಹ್ಮದ್ ಖಾನ್ ಪ್ರಶ್ನೆ
ವಿಜಯಪುರ, ಅ. 24: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಲಿ ನಡೆಸಿರುವ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ 'ಕುಮಾರಸ್ವಾಮಿ ಎಷ್ಟು ಜನ ಮುಸ್ಲಿಮರನ್ನು ಶಾಸಕರನ್ನಾಗಿ ಮಾಡಿದ್ದಾರೆ' ಎಂದು ಪ್ರಶ್ನಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಸ್ಲಿಮರನ್ನು ಮುಗಿಸುವುದು ಅವರ ದುರುದ್ದೇಶವನ್ನು ಕುಮಾರಸ್ವಾಮಿ ಹೊಂದಿದ್ದು, ಅಲ್ಪಸಂಖ್ಯಾತರನ್ನು ಬಲಿ ಕೊಡಲು ಗುರಿಯಾಗಿಸಿಕೊಂಡಿದ್ದಾರೆ' ಎಂದು ಆರೋಪಿಸಿದ್ದಾರೆ.
'ಕುಮಾರಸ್ವಾಮಿ ಕೇವಲ ಸಿದ್ಧರಾಮಯ್ಯ ವಿರೋಧಿ ಮಾತ್ರವಲ್ಲ, ಮುಸ್ಲಿಮ್ ಸಮುದಾಯದ ವಿರೋಧಿಯಾಗಿದ್ದಾರೆ' ಎಂದು ದೂರಿದ್ದಾರೆ.
Next Story