ಆರ್ ಟಿಇ ಅಡಿ ದಾಖಲಾದ ಮಕ್ಕಳ ಶುಲ್ಕ ಮರುಪಾವತಿ
ಬೆಂಗಳೂರು, ನ.19: ಶಿಕ್ಷಣ ಹಕ್ಕು ಕಾಯಿದೆ 2009ರ ಅಡಿ ಅನುದಾನರಹಿತ ಶಾಲೆಗಳಲ್ಲಿ ದಾಖಲಾದ ಮಕ್ಕಳ 2021-22ನೇ ಸಾಲಿನ ಶುಲ್ಕ ಮರುಪಾವತಿಗೆ ಆನ್ಲೈನ್ ತಂತ್ರಾಂಶದ ಮೂಲಕ ದಾಖಲೆ ಸಲ್ಲಿಸಲು ನ.17 ರಿಂದ ಮುಂದಿನ ಜ.17, 2022ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, 2021-22ನೇ ಸಾಲಿನ ಆರ್ಟಿಇ ಮಕ್ಕಳ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಖಾಸಗಿ ಅನುದಾನರಹಿತ ಶಾಲಾ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರಿಗೆ ಶಿಕ್ಷಣ ಇಲಾಖೆಯು ಮಾರ್ಗಸೂಚಿಗಳನ್ನು ಹೊರಡಿಸಿದೆ.
Next Story