ಎಸಿಬಿ ದಾಳಿ; ಬಿಡಿಎ ಎಂದರೆ 'ಭ್ರಷ್ಟಾಚಾರ ಡೆವಲಪ್ ಮೆಂಟ್ ಅಥಾರಿಟಿ' ಎಂದ ಕಾಂಗ್ರೆಸ್
ಬೆಂಗಳೂರು: 'ಬಿಜೆಪಿಯ 40ಶೇ. ಕಮಿಷನ್ ಆಡಳಿತದಲ್ಲಿ ಬಿಡಿಎ ಎಂದರೆ ಭ್ರಷ್ಟಾಚಾರ ಡೆವಲಪ್ ಮೆಂಟ್ ಅಥಾರಿಟಿ ಎಂದಾಗಿದೆ!' ಎಂದು ಕಾಂಗ್ರೆಸ್ ಟೀಕಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ(ಬಿಡಿಎ) ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದು, ಈ ಕುರಿತು ಟ್ವೀಟ್ ಮಾಡಿ ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಟೀಕಿಸಿದೆ
'ನಗರಾಭಿವೃದ್ಧಿ ಖಾತೆಯನ್ನು ಇಟ್ಟುಕೊಂಡಿರುವ ಮುಖ್ಯಮಂತ್ರಿಗಳೇ, ಬಿಡಿಯೆಯಲ್ಲಿ ನಡೆಯುತ್ತಿರುವ ಬೃಹತ್ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಿಮ್ಮಿಂದ ಸಾಧ್ಯವಾಗಿಲ್ಲವೇಕೆ? ಅಥವಾ ನಿಮಗೂ ಅದರಲ್ಲಿ ಪಾಲಿದೆಯೇ?' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರಶ್ನಿಸಿದೆ.
ಬಿಜೆಪಿಯ 40% ಕಮಿಷನ್ ಆಡಳಿತದಲ್ಲಿ BDA ಎಂದರೆ ಭ್ರಷ್ಟಾಚಾರ ಡೆವಲಪ್ಮೆಂಟ್ ಅಥಾರಿಟಿ ಎಂದಾಗಿದೆ!
— Karnataka Congress (@INCKarnataka) November 20, 2021
ನಗರಾಭಿವೃದ್ಧಿ ಖಾತೆಯನ್ನು ಇಟ್ಟುಕೊಂಡಿರುವ ಮುಖ್ಯಮಂತ್ರಿಗಳೇ, ಬಿಡಿಯೆಯಲ್ಲಿ ನಡೆಯುತ್ತಿರುವ ಬೃಹತ್ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಿಮ್ಮಿಂದ ಸಾಧ್ಯವಾಗಿಲ್ಲವೇಕೆ?
ಅಥವಾ ನಿಮಗೂ ಅದರಲ್ಲಿ ಪಾಲಿದೆಯೇ? pic.twitter.com/fzizL9AGKq