ಮೈಸೂರು: ಕಾರು ಶೋರೂಂನಲ್ಲಿ ಭಾರೀ ಅಗ್ನಿ ಅನಾಹುತ; ಕಾರುಗಳಿಗೆ ಹಾನಿ
ಮೈಸೂರು,ಡಿ.26: ಕಾರು ಶೋರೂಂ ಒಂದರಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು ಕಾರುಗಳು ಹೊತ್ತಿ ಉರಿದ ಘಟನೆ ಜೆಎಲ್ ಬಿ ರಸ್ತೆಯಲ್ಲಿರುವ ಸಿಕೆಸಿ ಕಾನ್ವೆಂಟ್ ಬಳಿ ನಡೆದಿದೆ.
ಮೈಸೂರಿನ ಜೆ ಎಲ್ ಬಿ ರಸ್ತೆಯಲ್ಲಿ ಸಿ.ಕೆ.ಸಿ ಕಾನ್ವೆಂಟ್ ಎದುರಲ್ಲಿರುವ ಅದ್ವೈತ್ ಹೂಂಡೈ ಶೋರೂಂ ನಲ್ಲಿ ರವಿವಾರ ಬೆಳಿಗ್ಗೆ ಸಂಭವಿಸಿರುವ ಬೆಂಕಿ ಅನಾಹುತದಲ್ಲಿ ಕಾರುಗಳು ಹೊತ್ತಿ ಉರಿದಿವೆ. ಬೆಂಕಿಯ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಹೊರಗೋಡಿ ಬಂದು ಸಿಬ್ಬಂದಿಗಳು ಪಾರಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಹೆಚ್ಚಿನ ಅನಾಹುತ ತಪ್ಪಿಸಿದರು.
ಸುಮಾರು ಹದಿನೈದರಿಂದ ಇಪ್ಪತ್ತು ಕಾರುಗಳು ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.
Next Story