ಮಡಿಕೇರಿ: ಬಸ್- ಕಾರು ಢಿಕ್ಕಿ; ನವ ದಂಪತಿ ಸೇರಿ ಮೂವರು ಮೃತ್ಯು
ಮಡಿಕೇರಿ ಜ.2 : ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಕೊಡಗು ಮೂಲದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಾಗಮಂಗಲದ ಕೆಂಪನಕೊಪ್ಪಲು ಗೇಟ್ ಬಳಿ ನಡೆದಿದೆ.
ಬೆಳ್ಳೂರು ಕಡೆಗೆ ತೆರಳುತ್ತಿದ್ದ ಬಸ್ ಮತ್ತು ಮೈಸೂರಿಗೆ ತೆರಳುತ್ತಿದ್ದ ಕಾರು ನಡುವೆ ಡಿಕ್ಕಿ ಸಂಭವಿಸಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಸೋಮವಾರಪೇಟೆ ಮೂಲದ ಸುದೀಪ್(35), ಶ್ರೀಜಾ(30) ಹಾಗೂ ತಂಗಮ್ಮ (55) ಮೃತ ಪಟ್ಟವರಾಗಿದ್ದಾರೆ. 15 ವರ್ಷದ ಯುವತಿಯೊಬ್ಬಳು ಗಂಭೀರ ಗಾಯಗಾಳಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರಪೇಟೆ ಸಮೀಪದ ಕುಂದಳ್ಳಿ ಗ್ರಾಮದ ಸುದೀಪ್ ಹಾಗೂ ಮುಳ್ಳುಸೋಗೆ ಗ್ರಾಮದ ಶ್ರೀಜಾ ಅವರಿಗೆ 20 ದಿನಗಳ ಹಿಂದೆಯಷ್ಟೇ ಸೋಮವಾರಪೇಟೆಯಲ್ಲಿ ವಿವಾಹವಾಗಿತ್ತು.
ಬಸ್ ಚಾಲಕನಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story