ರಾಜ್ಯದಲ್ಲಿ ಶನಿವಾರ 3,202 ಕೊರೋನ ಪ್ರಕರಣ ದೃಢ, 38 ಮಂದಿ ಸಾವು
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು, ಫೆ.12: ರಾಜ್ಯದಲ್ಲಿ ಶನಿವಾರ 3202 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 38 ಜನ ಸೋಂಕಿಗೆ ಬಲಿಯಾಗಿದ್ದು, 8,988 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 39,24,297ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 39,613ಕ್ಕೆ ತಲುಪಿದೆ.
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 38,747ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
38 ಸೋಂಕಿತರು ಬಲಿ: ಬಳ್ಳಾರಿ 2, ಬೆಳಗಾವಿ 1, ಬೆಂಗಳೂರು ನಗರ 10, ಬೀದರ್ 2, ಚಾಮರಾಜನಗರ 1, ಚಿತ್ರದುರ್ಗ 1, ದಕ್ಷಿಣ ಕನ್ನಡ 4, ಧಾರವಾಡ 2, ಹಾಸನ 1, ಹಾವೇರಿ 3, ಕೊಡಗು 1, ಮೈಸೂರು 2, ರಾಯಚೂರು 2, ತುಮಕೂರು 2, ಉಡುಪಿ 1, ಉತ್ತರ ಕನ್ನಡ 1, ವಿಜಯಪುರ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 3202 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಲಕೋಟೆ 40, ಬಳ್ಳಾರಿ 126, ಬೆಳಗಾವಿ 250, ಬೆಂಗಳೂರು ಗ್ರಾಮಾಂತರ 21, ಬೆಂಗಳೂರು ನಗರ 1293, ಬೇದರ್ 23, ಚಾಮರಾಜನಗರ 62, ಚಿಕ್ಕಮಗಳೂರು 21, ಚಿತ್ರದುರ್ಗ 91, ದಕ್ಷಿಣ ಕನ್ನಡ 62, ದಾವಣಗೆರೆ 19, ಧಾರವಾಡ 69, ಗದಗ 38, ಹಾಸನ 60, ಹಾವೇರಿ 19, ಕಲಬುರಗಿ 43, ಕೊಡಗು 99, ಕೋಲಾರ 32, ಮಂಡ್ಯ 42, ಮೈಸೂರು 197, ರಾಯಚೂರು 22, ರಾಮನಗರ 20, ಶಿವಮೊಗ್ಗ 155, ತುಮಕೂರು 142, ಉಡುಪಿ 67, ಉತ್ತರ ಕನ್ನಡ 62, ವಿಜಯಪುರ 55, ಯಾದಗಿರಿ ಜಿಲ್ಲೆಯಲ್ಲಿ 5 ಪ್ರಕರಣ ಪತ್ತೆಯಾಗಿದೆ.