37 ಇನ್ ಸ್ಪೆಕ್ಟರ್ ಗಳ ವರ್ಗಾವಣೆ
ಬೆಂಗಳೂರು, ಮೇ 16:ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಪೊಲೀಸ್ ಠಾಣೆಗಳ 37 (ಸಿವಿಲ್) ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಲಾಗಿದೆ.
ಇನ್ ಸ್ಪೆಕ್ಟರ್ ಮುಹಮ್ಮದ್ ಎಂ.ಎ.-ಪಿಟಿಎಸ್ ಥಣಿಸಂದ್ರ, ಅಂಬರೀಷ್-ಹೊಸಕೋಟೆ ಬೆಸ್ಕಾಂ, ಶಿವನಗೌಡ-ತೀರ್ಥಹಳ್ಳಿ ಪೊಲೀಸ್ ಠಾಣೆ, ಕೊಟ್ರೇಶ್-ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ, ವೆಂಕಟಾಚಲಯ್ಯ-ಜಾಲಹಳ್ಳಿ ಪೊಲೀಸ್ ಠಾಣೆ, ಸತ್ಯನಾರಾಯಣ ಸಿಟಿ -ಕೆಪಿಸಿಟಿ ಎಸ್ಬಿ ಬೆಂಗಳೂರು ಸೇರಿ 37 ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಲಾಗಿದೆ.
ಮತ್ತೊಂದೆಡೆ, ವರ್ಗಾವಣೆಯಾದರೂ ವರದಿ ಮಾಡಿಕೊಳ್ಳದ 38 ಇನ್ಸ್ಪೆಕ್ಟರ್ ಗಳಿಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಕಳೆದ 15 ದಿನಗಳಿಂದ ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹಲವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ವರ್ಗಾವಣೆಯಾದರೂ ನಿಯುಕ್ತಿಗೊಂಡ ಸ್ಥಾನಕ್ಕೆ ವರದಿ ಮಾಡಿಕೊಂಡಿರಲಿಲ್ಲ. ಹೀಗಾಗಿ ಆದೇಶ ಪಾಲನೆ ಮಾಡದ 38 ಇನ್ಸ್ಪೆಕ್ಟರ್ ಗಳಿಗೆ ಈ ಬಗ್ಗೆ ಏಳು ದಿನದೊಳಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.