ಎಸೆಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ಖಾಸಗಿ ಶಾಲೆಯ ಕ್ಲರ್ಕ್ ವಶಕ್ಕೆ
ಫೈಲ್ ಚಿತ್ರ
ರಾಮನಗರ: ರಾಜ್ಯಾದ್ಯಂತ ನಡೆದ ಎಸೆಸೆಲ್ಸಿ ಪರೀಕ್ಷೆಯ ವಿಜ್ಞಾನ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಗಡಿಯ ಖಾಸಗಿ ಪ್ರೌಢಶಾಲೆಯ ಕ್ಲರ್ಕ್ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಎಪ್ರಿಲ್ನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯ ವಿಜ್ಞಾನ ಪ್ರಶ್ನೆಪತ್ರಿಕೆಯನ್ನು ಆರೋಪಿಯು ಪರೀಕ್ಷೆ ಅವಧಿಗೆ ಮುನ್ನವೇ ವಾಟ್ಸ್ಅಪ್ ಗ್ರೂಪ್ ಗೆ ಹಾಕಿ ಬಳಿಕ ಡಿಲಿಟ್ ಮಾಡಿದ್ದ ಎಂದು ಹೇಳಲಾಗಿದೆ.
ಅದೇ ವಾಟ್ಸ್ಅಪ್ ಗ್ರೂಪ್ ನಲ್ಲಿದ್ದ ಶಿಕ್ಷಕರೊಬ್ಬರು ಇದನ್ನು ಗಮನಿಸಿದ್ದು, ಬಳಿಕ ಸ್ಥಳೀಯ ಕೆಲವರು ಆತನನ್ನು ಇದೇ ವಿಚಾರಕ್ಕೆ ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡಿದ್ದರು ಎನ್ನಲಾಗಿದೆ.
ಪರೀಕ್ಷೆ ಮುಗಿದ ತಿಂಗಳ ಬಳಿಕ ಈ ವಿಷಯ ಪೊಲೀಸರ ಗಮನಕ್ಕೆ ಬಂದಿದ್ದು, ಸೋಮವಾರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story