ಹುಬ್ಬಳ್ಳಿ: ಆಸ್ಪತ್ರೆಯಲ್ಲಿ ತಾಯಿಯ ಕೈಯಲ್ಲಿದ್ದ ಮಗು ಅಪಹರಣ; ಆರೋಪ
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಹಸುಗೂಸೊಂದನ್ನು ತಾಯಿಯ ಕೈಯಿಂದ ಕಿತ್ತುಕೊಂಡು ಪರಾರಿಯಾಗಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಇಂದು (ಸೋಮವಾರ) ಮಧ್ಯಾಹ್ನ ವೇಳೆ ವ್ಯಕ್ತಿಯೊಬ್ಬ ಆಸ್ಪತ್ರೆಯ ವಾರ್ಡ್ನೊಳಗೆ ನುಗ್ಗಿ ತನ್ನ 40 ದಿನದ ಹೆಣ್ಣು ಮಗುವನ್ನು ಕೈಯಿಂದ ಕಿತ್ತುಕೊಂಡಿದ್ದಾನೆ. ಸಹಾಯಕ್ಕಾಗಿ ಕರೆಯುವಷ್ಟರಲ್ಲೇ ಆತ ಹೊರಗೆ ಓಡಿ ಹೋಗಿದ್ದಾನೆ ಎಂದು ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ನಿವಾಸಿಯಾಗಿರುವ ಮಗುವಿನ ತಾಯಿ ಝೈನಾಬ್ ಹುಸೇನ್ ಸಾಬ್ ಶೇಖ್ ಆರೋಪಿಸಿದ್ದಾರೆ.
ಮಗು ಅಪಹರಣ ಆಗಿರುವ ಬಗ್ಗೆ ಸಂಬಂಧಿಕರು ಮತ್ತು ಆಸ್ಪತ್ರೆಯಲ್ಲಿದ್ದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಈ ಸಂಬಂಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆಸ್ಪತ್ರೆಗೆ ಭೇಟಿ ನೀಡಿ ತಾಯಿ ಹಾಗೂ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದಿದ್ದಾರೆ.
ಕಪ್ಪು ಟೀ ಶರ್ಟ್ ಧರಿಸಿದ ಮಧ್ಯವಯಸ್ಕನೊಬ್ಬ ಕೈಯಿಂದ ಮಗುವನ್ನು ಕಿತ್ತುಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮಗುವಿಗೆ ಕಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇನ್ನು ಪೊಲೀಸರು ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ವಿಚಾರಣೆ ನಡೆಸುತ್ತಿದ್ದಾರೆ.