ದ್ವಿತೀಯ ಪಿಯುಸಿ ಫಲಿತಾಂಶ; ಶಾಸಕ ಸಾ.ರಾ.ಮಹೇಶ್ ಪತ್ನಿ ಅನಿತಾ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ
ಮೈಸೂರು,ಜೂ.18: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಕೆ.ಆರ್.ನಗರದ ಶಾಸಕ ಸಾ.ರಾ. ಮಹೇಶ್ ಅವರ ಪತ್ನಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ಕೆ.ಆರ್.ನಗರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಪತ್ನಿ ಅನಿತಾ ಅವರು ಪಿಯುಸಿ ಕಲಾವಿಭಾಗದಲ್ಲಿ 600 ಅಂಕಗಳಿಗೆ 418 ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. 1993ರಲ್ಲಿ ಅನಿತಾ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದರು.
ಇದೀಗ 30 ವರ್ಷಗಳ ಬಳಿಕ ಪಿಯುಸಿ ಪಾಸಾಗಿರುವುದು ಕುಟುಂಬಸ್ಥರಿಗೆ ಸಂತಸ ಮೂಡಿಸಿದೆ. ಖಾಸಗಿಯಾಗಿ ಅನಿತಾ ಪರೀಕ್ಷೆ ಬರೆದಿದ್ದರು.
Next Story