ಡಿಪ್ಲೊಮಾ ಇನ್ ಹ್ಯಾಂಡ್ಲೂಮ್ ಅಂಡ್ ಟೆಕ್ಸ್ ಟೈಲ್ ಪ್ರವೇಶಕ್ಕೆ ಅವಧಿ ವಿಸ್ತರಣೆ
ಬೆಂಗಳೂರು, ಜು. 2: ಪ್ರಸಕ್ತ ಸಾಲಿಗೆ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಕೈಮಗ್ಗ ಮತ್ತು ಜವಳಿ ಇಲಾಖೆ, ನರಸಾಪುರ, ಗದಗ-ಬೆಟಗೇರಿ ಇಲ್ಲಿ ಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲಮೋ ಇನ್ ಹ್ಯಾಂಡ್ಲೂಮ್ ಅಂಡ್ ಟೆಕ್ಸ್ ಟೈಲ್ ಟೆಕ್ನಾಲಜಿ ಕೋರ್ಸಿನ ಪ್ರಥಮ ವರ್ಷದ ಪ್ರವೇಶಕ್ಕಾಗಿ ಜುಲೈ 11ರ ವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.
ಎಸೆಸೆಲ್ಸಿ ಅಥವಾ ಸಮಾನ ವಿದ್ಯಾರ್ಹತೆವುಳ್ಳವರು ಅರ್ಜಿ ಸಲ್ಲಿಸಲು ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಎಸ್.ಜೆ.ಪಿ ಕಾಲೇಜ್ ಆವರಣ, ಕೆ.ಆರ್.ಸರ್ಕಲ್, ಬೆಂಗಳೂರು, ದೂರವಾಣಿ ಸಂಖ್ಯೆ- 080-22341176ಅನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Next Story