ಈಗ ರೂಪಾಯಿ ಬೀಳುತ್ತಿದ್ದರೂ ಸಿಂಹ ಘರ್ಜಿಸುತ್ತಿದೆ: ಡಿಕೆಶಿ ವ್ಯಂಗ್ಯ
ಬೆಂಗಳೂರು: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿದ್ದು, ವಿರೋಧ ಪಕ್ಷಗಳು ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆ ತಗೆದುಕೊಂಡಿದೆ.
ಶುಕ್ರವಾರ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹೊಸ ಸಂಸತ್ ಭವನದ ಮೇಲಿನ ರಾಷ್ಟ್ರೀಯ ಲಾಂಛನವನ್ನು ಪರೋಕ್ಷವಾಗಿ ಉಲ್ಲೇಖಿಸಿ ಟೀಕಿಸಿದ್ದಾರೆ.
'ಮೌನ ಮತ್ತು ಘರ್ಜನೆ ನಡುವಿನ ವ್ಯತ್ಯಾಸ! ರೂಪಾಯಿ ಘರ್ಜಿಸುವಾಗ ಸಿಂಹ ಮೌನವಾಗಿತ್ತು. ಈಗ ರೂಪಾಯಿ ಬೀಳುತ್ತಿದೆ ಆದರೆ ಸಿಂಹ ಘರ್ಜಿಸುತ್ತಿದೆ' ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.
'ನಮ್ಮ ಘರ್ಜಿಸುವ ಸಿಂಹದ ಮೊದಲ ಸಾಧನೆ ' ಎಂದು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಕೂಡ ಟ್ವೀಟ್ ಮಾಡಿದ್ದಾರೆ.
ಮೌನ ಮತ್ತು ಘರ್ಜನೆ ನಡುವಿನ ವ್ಯತ್ಯಾಸ!
— DK Shivakumar (@DKShivakumar) July 15, 2022
ರೂಪಾಯಿ ಘರ್ಜಿಸುವಾಗ ಸಿಂಹ ಮೌನವಾಗಿತ್ತು.
ಈಗ ರೂಪಾಯಿ ಬೀಳುತ್ತಿದೆ ಆದರೆ ಸಿಂಹ ಘರ್ಜಿಸುತ್ತಿದೆ.#RupeeAt80
First achievement of our roaring lion.#Congratulations pic.twitter.com/wUWIdEbdfU
— Dr H.C.Mahadevappa (@CMahadevappa) July 15, 2022
Next Story