ಬಿಜೆಪಿ ದುರಾಡಳಿತದ ಮೂಲಕ ಹಿಂದೂಗಳ ಬದುಕನ್ನು ಮುಳುಗಿಸಿದೆ: ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು, ಆ.22: ಸಿದ್ದರಾಮಯ್ಯನವರು ಏನು ಊಟ ಮಾಡಿದರು ಎಂಬುದು ನನಗೆ ತಿಳಿದಿಲ್ಲ ಅದು ತಿಳಿದುಕೊಳ್ಳಲೇ ಬೇಕಾದ ವಿಚಾರವೂ ಅಲ್ಲ. ಸಾತ್ವಿಕ ಆಹಾರ ತಿನ್ನುವವರು ಈ ಸಮಾಜದಲ್ಲಿ ಮಾಡುತ್ತಿರುವ ದೌರ್ಜನ್ಯ ಎಷ್ಟು ಎಂಬುದು ನಮಗೇನು ತಿಳಿದಿಲ್ಲವೇ? ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ಗಳನ್ನು ಮಾಡಿರುವ ಅವರು, ಸಾತ್ವಿಕ ಆಹಾರ ಸೇವಿಸುವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸುವೆ ಎನ್ನುತ್ತಾರೆ. ಸಾತ್ವಿಕ ಆಹಾರ ಸೇವಿಸುವ ತೇಜಸ್ವಿ ಸೂರ್ಯ ಜನ ಪ್ರತಿನಿಧಿಯಾಗಿದ್ದುಕೊಂಡೇ ಮುಸಲ್ಮಾನರ ಮೇಲೆ ನೇರವಾಗಿ ದ್ವೇಷ ಕಾರುತ್ತಾರೆ. ಸಾತ್ವಿಕ ಆಹಾರ ಸೇವಿಸುವವರು ಹೀಗೆಲ್ಲಾ ಕೆಟ್ಟದಾಗಿ ನಡೆದುಕೊಳ್ಳಬಹುದೇ? ಎಂದು ಪ್ರಶ್ನಿಸಿದ್ದಾರೆ.
ನನ್ನ ಪ್ರಕಾರ ಕೆಟ್ಟ ಮನಸ್ಸು ನಮ್ಮ ಆಹಾರ ಕ್ರಮವನ್ನು ಅವಲಂಬಿಸಿಲ್ಲ ಅದು ನಮ್ಮ ಮನಸ್ಥಿತಿಯನ್ನು ಅವಲಂಬಿಸಿದೆ. ರಾಜಕಾರಣದಲ್ಲಿ ಊಟ ಎಂಬುದು ಚರ್ಚೆಯ ವಿಚಾರವೇ ಅಲ್ಲ. ಬಿಜೆಪಿಯು ಕೆಲಸಕ್ಕೆ ಬಾರದ ವಿಚಾರ ಇಟ್ಟುಕೊಂಡು ಅನಗತ್ಯ ಚರ್ಚೆ ಮಾಡುತ್ತಿದ್ದು ತನ್ನ ದುರಾಡಳಿತದ ಮೂಲಕ ಹಿಂದೂಗಳ ಬದುಕನ್ನು ಮುಳುಗಿಸಿದೆ ಎಂದು ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಪ್ರಕಾರ
— Dr H.C.Mahadevappa (@CMahadevappa) August 22, 2022
ಕೆಟ್ಟ ಮನಸ್ಸು ನಮ್ಮ ಆಹಾರ ಕ್ರಮವನ್ನು ಅವಲಂಬಿಸಿಲ್ಲ ಅದು ನಮ್ಮ ಮನಸ್ಥಿತಿಯನ್ನು ಅವಲಂಬಿಸಿದೆ
ರಾಜಕಾರಣದಲ್ಲಿ ಊಟ ಎಂಬುದು ಚರ್ಚೆಯ ವಿಚಾರವೇ ಅಲ್ಲ. ಬಿಜೆಪಿಯು ಕೆಲಸಕ್ಕೆ ಬಾರದ ವಿಚಾರ ಇಟ್ಟುಕೊಂಡು ಅನಗತ್ಯ ಚರ್ಚೆ ಮಾಡುತ್ತಿದ್ದು ತನ್ನ ದುರಾಡಳಿತದ ಮೂಲಕ ಹಿಂದೂಗಳ ಬದುಕನ್ನು ಮುಳುಗಿಸಿದೆ
4/4