ಹನೂರು: ವ್ಯಕ್ತಿ, ಜಾನುವಾರು ಬಲಿ ತೆಗೆದುಕೊಂಡಿದ್ದ ಚಿರತೆ ಸೆರೆ
ಚಾಮರಾಜನಗರ: ವ್ಯಕ್ತಿ ಹಾಗೂ ಜನುವಾರುವನ್ನು ಬಲಿ ತೆಗೆದುಕೊಂಡಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಎಲ್ಲೇಮಾಳದ ಮಲ್ಲಯ್ಯನಪುರ ಬೀಟ್ ನಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ಒಂದು ತಿಂಗಳಿನಿಂದ ಚಿರತೆಯನ್ನು ಹಿಡಿಯಲು ಅರಣ್ಯ ಅಧಿಕಾರಿಗಳು ಯತ್ನಿಸುತ್ತಿದ್ದರು. ವ್ಯಕ್ತಿ ಹಾಗೂ ಜನುವಾರುವನ್ನು ಬಲಿ ತೆಗೆದುಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದ್ದು, ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.