-

ಪಕ್ಕದಲ್ಲಿ ಎರಡು ಗುಂಬಜ್‌ ಇದ್ದರೆ ಅದು ಮಸೀದಿ ಎಂದ ಸಂಸದ ಪ್ರತಾಪ್ ಸಿಂಹ: ನೆಟ್ಟಿಗರ ತರಾಟೆ

-

ಮೈಸೂರು: ಬಿಜೆಪಿ ನಾಯಕರ ನಡುವಿನ ಅಸಮಾಧಾನ ಬಹಿರಂಗಗೊಳ್ಳಲು ಕಾರಣವಾದ ಮೈಸೂರು ಬಸ್‌ಸ್ಟಾಂಡ್‌ ವಿವಾದಕ್ಕೀಗ ತಾರ್ಕಿಕ ಅಂತ್ಯ ದೊರೆತಿದ್ದು, ತಾನು ಹೇಳಿದಂತೆ ನಡೆದುಕೊಂಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿಕೊಂಡಿದ್ದಾರೆ. 

ಬಸ್‌ ನಿಲ್ದಾಣದ ರಚನೆಯಲ್ಲಿ ಮಾರ್ಪಾಡು ತಂದ ಬಳಿಕ ಟ್ವಿಟರ್‌ ಮೂಲಕ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, “ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ  ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು.” ಎಂದು ಹೇಳಿದ್ದಾರೆ. 

ಸದ್ಯ, ಈ ವಿವಾದಕ್ಕೆ ಸಂಬಂಧಿಸಿದಂತೆ ನೆಟ್ಟಿಗರು ಪ್ರತಾಪ್ ಸಿಂಹರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೊಡ್ಡ ಗುಂಬಝ್‌ ಅಕ್ಕಪಕ್ಕ ಚಿಕ್ಕ ಗುಂಬಜ್‌ ಇದ್ದರೆ ಅದು ಮಸೀದಿ ಎಂದು ಹೇಳಿದ ಸಂಸದರ ಹೇಳಿಕೆಗೆ ವ್ಯಂಗ್ಯವಾಡಿರುವ ನೆಟ್ಟಿಗರು ವಿಧಾನಸೌಧದ ಚಿತ್ರವನ್ನು ಹಾಕಿ ಆ ಬಗ್ಗೆ ಪ್ರತಿಕ್ರಿಯೆ ಕೇಳಿದ್ದಾರೆ. 

ಹೇಮಂತ್‌ ಗೌಡ ಎಂಬವರು ಪ್ರತಿಕ್ರಿಯಿಸಿ, “ಇಲ್ಲಿ ನಾವು ಹಿಂದೂಗಳು ಗಮನಿಸಬೇಕಾದ ವಿಷಯ. ಕೇಂದ್ರದಲ್ಲಿ ರಾಜ್ಯದಲ್ಲಿ 2 ಕಡೆ ಬಿಜೆಪಿನೆ ಇರೋದು. ಬಸ್ ಸ್ಟಾಂಡ್ ಕಟ್ಸಿರೋದು ಬಿಜೆಪಿ ಅವರೇ, ಆಮೇಲೆ ಅದುಕ್ಕೆ ಧರ್ಮದ ಬಣ್ಣ ಬಳಿದು ಒಡೆದು ಹಾಕೋರು ಕೂಡ ಅವರೇ. ಅಭಿವೃದ್ಧಿ ಮಾಡದೇ ಇದ್ರೆ ಹಿಂಗೆ ಆಗೋದು. ಎಲೆಕ್ಷನ್ time ಅಲ್ಲಿ ಧರ್ಮದ ಹೆಸರಲ್ಲಿ ಭಿಕ್ಷೆ ಬೇಡೋದು. ನಮ್ಮ ಪಬ್ಲಿಕ್ ದುಡ್ಡನ್ನ ಸುಮ್ನೆ ವೇಸ್ಟ್ ಮಾಡ್ತಾವ್ರೆ. ನೀವೇ ಕಟ್ಸಿ ನೀವೇ ಒಡದು ಹಾಕಿ. ನೀವೇ ನಿಮ್ಮ ಪಾಡಿಗೆ ನೀವೇ ಆ ಧರ್ಮ ಈ ಧರ್ಮ ಅಂತ ಜನಗಳನ್ನ ಮುಟ್ಟಾಳರನ್ನಾಗಿ ಮಾಡಿ. ನಮ್ಮ ಜನಗಳು ಯೋಚನೆ ಮಾಡದೇ, ಯಾವನೋ ಫೀಡ್ ಮಾಡಿದ್ದೆಲ್ಲನು ಇಟ್ಕೊಂಡು ಬಿಜೆಪಿಗೆ ವೋಟ್ ಹಾಕಿ ಮುಟ್ಟಾಳರಾಗ್ತಾರೆ.” ಎಂದು ಬರೆದಿದ್ದಾರೆ.

“ಧರ್ಮದ ಕಾಮಾಲೆ ರೋಗ ಬಂದವರಿಗೆ ಕಣ್ಣಿಗೆ ಕಾಣುವ ಎಲ್ಲಾ ಗೋಪುರಗಳು ಮಸೀದಿ ತರಹ ಮತ್ತು ಎಲ್ಲಾ ಗುಂಡು ಕಲ್ಲುಗಳೂ ಶಿವಲಿಂಗದ ತರಹ ಕಾಣಿಸುತ್ತದೆ! ಭಾರತದ ವಸ್ತುಶಿಲ್ಪದಲ್ಲಿ ಎಲ್ಲಾ ಧರ್ಮಗಳ ಸಂಯೋಜನೆ, ಇದೆ ನಮ್ಮ ದೇಶದ ತಾಕತ್ತು ಮತ್ತು ವಿಶೇಷತೆ.” ಎಂದು ಯಶವಂತ್‌ ಎಂಬವರು ಟ್ವೀಟ್‌ ಮಾಡಿದ್ದಾರೆ. 

“ನೀವು ಬೇಕಂತಲೇ ಕಟ್ಟಿ ನೀವೇ ಸರಿ ಪಡಿಸಿ ದೊಡ್ಡದಾಗಿ ಪೋಸ್ ಕೊಟ್ಟು ಮತ ಪಡೆಯುವ ಯೋಜನೆ, ಅದಲ್ಲದೆ ತಮಗೆ ಕಟ್ಟುವ ಮೊದಲು ಇದೆಲ್ಲ ಗಮನಕ್ಕೆ ಬರಲಿಲ್ಲ ಎಂದ್ರೆ ನೀವು ಒಬ್ಬ ಜನಪ್ರತಿನಿಧಿನಾ” ಎಂದು ರವೀಂದ್ರ ಸಾಲ್ಯಾನ್‌ ಎಂಬವರು ಪ್ರಶ್ನಿಸಿದ್ದಾರೆ. 

“ನೀವು ಉಸಿರಾಡುತ್ತಿರುವ ಆಮ್ಲಜನಕವನ್ನೇ ಒಬ್ಬ ಮುಸಲ್ಮಾನ ಕೂಡ ಉಸಿರಾಡುತ್ತಿದ್ದಾನೆ, ಸೂರ್ಯ,ಚಂದ್ರ,ನೀರು,ಮರ,ಗಿಡ,ಮಣ್ಣು ಎಲ್ಲವೂ. ನೀವು ಇಂದು ಬೆಳಿಗ್ಗೆ ಸೇವಿಸುವ ಆಹಾರ ಧಾನ್ಯ ಒಬ್ಬ ಮುಸಲ್ಮಾನ ಬೆಳೆದಿದ್ದಾಗಿರಬಹುದು. ಒಮ್ಮೆ ಪ್ರಶ್ನಿಸಿಕೊಳ್ಳಿ ನಿಮ್ಮನ್ನೇ. ಮನುಷ್ಯನೋ ಇಲ್ಲ ಮತಾಂಧನೊ ಎಂದು..!! ನಾಚಿಕೆಗೇಡು.” ಎಂದು ಯಶಸ್‌ ಎಂಬ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top