ಟ್ರ್ಯಾಕ್ಟರ್, ಬೈಕ್ ಢಿಕ್ಕಿ: ಬೈಕ್ ಸವಾರ ಮೃತ್ಯು
ಮುಂಡಗೋಡ, ಮಾ.7: ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ತಾಲೂಕಿನ ಮುಂಡಗೋಡ-ಬಂಕಾಪುರ ರಸ್ತೆ ಸ್ಮಶಾನದ ಬಳಿ ಇಂದು ನಡೆದಿದೆ.
ಮೃತಪಟ್ಟ ಬೈಕ್ ಸವಾರನನ್ನು ಯಲ್ಲಪ್ಪ ಸುರಸಟ್ಟಿಕೊಪ್ಪ(38) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಮುಂಡಗೋಡ ತಾಲೂಕಿನ ಹುನಗುಂದ ಪಂಚಾಯತ್ ವ್ಯಾಪ್ತಿಯ ಅಗಡಿ ಗ್ರಾಮದವನು ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story