ಮಡಿಕೇರಿ: ಭಾರೀ ಮಳೆಗೆ ಬರೆ ಕುಸಿತ
ಮಡಿಕೇರಿ, ಸೆ.19: ನಗರದಾದ್ಯಂತ ಸೋಮವಾರ ತಡರಾತ್ರಿ ಸುರಿದ ಭಾರೀ ಮಳೆಗೆ ರಾಜಾಸೀಟು ರಸ್ತೆ ಬಳಿಯಿರುವ ಬರೆ ಕುಸಿದಿದೆ. ಅಲ್ಲದೆ, ಕೊಡವ ಸಮಾಜದ ತಡೆಗೋಡೆಯೂ ಬಿದ್ದಿದ್ದು, ಏರುತಗ್ಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಬರೆ ಕುಸಿದ ಘಟನೆ ನಡೆದಿದೆ.
ಮಡಿಕೇರಿ ತಾಲೂಕಿನಲ್ಲಿ ಮಂಗಳವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ತಿಳಿಬಿಸಿಲಿನ ವಾತಾವರಣ ಕಂಡು ಬಂತು. ದಕ್ಷಿಣ ಕೊಡಗಿನಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿತ್ತು ಎಂದು ತಿಳಿದು ಬಂದಿದೆ.
Next Story