ಭಾರತ ಫುಟ್ಬಾಲ್ ನಾಯಕ ಸುನೀಲ್ ಚೆಟ್ರಿಗೆ ಡಿ.4ಕ್ಕೆ ವಿವಾಹ
ಹೊಸದಿಲ್ಲಿ, ನ.21: ಭಾರತದ ಫುಟ್ಬಾಲ್ ನಾಯಕ ಸುನೀಲ್ ಚೆಟ್ರಿ ತನ್ನ ದೀರ್ಘಕಾಲದ ಸ್ನೇಹಿತೆ ಸೋನಮ್ ಭಟ್ಟಾಚಾರ್ಯ ಅವರನ್ನು ಡಿ.4 ರಂದು ವಿವಾಹವಾಗಲಿದ್ದಾರೆ. ಸೋನಮ್ ಮೋಹನ್ ಬಗಾನ್ನ ದಂತಕತೆ ಸುಬ್ರತಾ ಭಟ್ಟಾಚಾರ್ಯರ ಪುತ್ರಿ.
ಸೋಮವಾರ ಹರ್ಯಾಣದ ಗುರುಗ್ರಾಮದಲ್ಲಿ ಸಂಗೀತಾ ಕಾರ್ಯಕ್ರಮ ನಡೆದಿದ್ದು ಡಿ.4 ರಂದು ಕೋಲ್ಕತ್ತಾದಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಡಿ.24 ರಂದು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ. ಸೋನಮ್ ಸ್ಕಾಟ್ಲೆಂಡ್ನಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಪದವಿ ಪಡೆದಿದ್ದಾರೆ.
Next Story