ಬಿಹಾರ ತಂಡವನ್ನು ರಣಜಿಗೆ ಸೇರಿಸಿಕೊಳ್ಳಲು ಬಿಸಿಸಿಐಗೆ ಸುಪ್ರೀಂ ಆದೇಶ
ಹೊಸದಿಲ್ಲಿ, ಜ.4: ಬಿಹಾರ ಕ್ರಿಕೆಟ್ ತಂಡವನ್ನು ರಣಜಿ ಟ್ರೋಫಿ ಸೇರಿದಂತೆ ದೇಶಿಯ ಇತರ ಟೂರ್ನಮೆಂಟ್ಗಳಲ್ಲಿ ಮುಂದಿನ ಅವಧಿಯಲ್ಲಿ ಸೇರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಗುರುವಾರ ಬಿಸಿಸಿಐಗೆ ಆದೇಶ ನೀಡಿದೆ. ಬಿಹಾರ ಕ್ರಿಕೆಟ್ ಸಂಸ್ಥೆ ಬಿಸಿಸಿಐನಲ್ಲಿ ಸದಸ್ಯತ್ವನ್ನು ಕಳೆದುಕೊಂಡಿದ್ದು, ಇದರಿಂದಾಗಿ 2000ರಿಂದ ಬಿಹಾರ ಕ್ರಿಕೆಟ್ ತಂಡಕ್ಕೆ ರಣಜಿ ಸೇರಿದಂತೆ ಯಾವುದೇ ದೇಶಿಯ ಟೂರ್ನಮೆಂಟ್ಗಳಲ್ಲಿ ಆಡುವ ಅವಕಾಶ ಇಲ್ಲದಾಗಿದೆ.
ಕ್ರಿಕೆಟ್ನ ಹಿತದೃಷ್ಟಿಯಿಂದ ಬಿಹಾರ ಕ್ರಿಕೆಟ್ ಸಂಸ್ಥೆಗೆ ದೇಶಿಯ ಟೂರ್ನಮೆಂಟ್ಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Next Story