ಐಪಿಎಲ್ ಇತಿಹಾಸದಲ್ಲೇ ಅತೀ ವೇಗದ ಅರ್ಧಶತಕ ಸಿಡಿಸಿದ ಕೆ.ಎಲ್. ರಾಹುಲ್
ಹೊಸದಿಲ್ಲಿ, ಎ,8: ಐಪಿಎಲ್ ಇತಿಹಾಸದಲ್ಲೇ ಅತೀ ವೇಗದ ಅರ್ಧಶತಕ ಸಿಡಿಸಿರುವ ಕಿಂಗ್ಸ್ ಇಲೆವೆನ್ ತಂಡದ ಆಟಗಾರ ಕೆ.ಎಲ್. ರಾಹುಲ್ ಹೊಸ ದಾಖಲೆ ಬರೆದಿದ್ದಾರೆ.
ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಅಮಿತ್ ಮಿಶ್ರಾ ಅವರ ಒಂದೇ ಓವರ್ ನಲ್ಲಿ ರಾಹುಲ್ 24 ರನ್ ಗಳಿಸಿದ್ದಾರೆ. ಮೊದಲ ಮೂರು ಓವರ್ ಗಳೊಳಗಾಗಿ 50 ರನ್ ಬಾರಿಸಿದ ದಾಖಲೆಯನ್ನೂ ಇವರು ನಿರ್ಮಿಸಿದ್ದಾರೆ.
ಕೇವಲ 16 ಎಸೆತಗಳಲ್ಲಿ 51 ರನ್ ಗಳಿಸಿದ ರಾಹುಲ್ ಆರು ಬೌಂಡರಿಗಳು ಹಾಗು ನಾಲ್ಕು ಸಿಕ್ಸರ್ ಸಿಡಿಸಿದರು.
Next Story