ಕೋಲ್ಕತಾ ನೈಟ್ ರೈಡರ್ಸ್ಗೆ ಜಯ
ಬೆಂಗಳೂರು, ಎ.29: ಐಪಿಎಲ್ ಟ್ವೆಂಟಿ-20 ಟೂರ್ನಿಯ 29ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ 6 ವಿಕೆಟ್ಗಳ ಜಯ ಗಳಿಸಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 176 ರನ್ಗಳ ಸವಾಲು ಪಡೆದ ಕೋಲ್ಕತಾ ನೈಟ್ ರೈಡರ್ಸ್ ತಂಡ ಇನ್ನೂ 5ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ 176ರನ್ ಗಳಿಸಿ ಗೆಲುವಿನ ದಡ ಸೇರಿತು.
ಕೋಲ್ಕತಾ ತಂಡದ ಕ್ರಿಸ್ ಲಿನ್ 62 ರನ್( 52ಎ, 7ಬೌ, 1ಸಿ ) , ಸುನೀಲ್ ನರೇನ್ 27 ರನ್, ರಾಬಿನ್ ಉತ್ತಪ್ಪ 36 ರನ್, ನಿತೀಶ್ ರಾಣಾ 15ರನ್ , ನಾಯಕ ದಿನೇಶ್ ಕಾರ್ತಿಕ್ 23 ರನ್, ಶುಭಮ್ ಗಿಲ್ ಔಟಾಗದೆ5 ರನ್ ಗಳಿಸಿದರು.
Next Story