ತೀವ್ರ ವಿರೋಧದ ನಂತರ ಇಸ್ರೇಲ್ ವಿರುದ್ಧದ ಫುಟ್ಬಾಲ್ ಪಂದ್ಯ ರದ್ದುಗೊಳಿಸಿದ ಅರ್ಜೆಂಟಿನಾ
ಹೊಸದಿಲ್ಲಿ, ಜೂ.6: ಇಸ್ರೇಲ್ ವಿರುದ್ಧ ನಡೆಯಲಿದ್ದ ಪಂದ್ಯವನ್ನು ಅರ್ಜೆಂಟಿನಾ ರಾಷ್ಟ್ರೀಯ ಫುಟ್ ಬಾಲ್ ತಂಡ ರದ್ದುಗೊಳಿಸಿರುವುದಾಗಿ ವರದಿಯಾಗಿದೆ.
ತಂಡದ ನಾಯಕ ಲಿಯೋನಲ್ ಮೆಸ್ಸಿ ವಿರುದ್ಧ ತೀವ್ರ ಟೀಕೆ ವ್ಯಕ್ತವಾದ ನಂತರ ಇದೇ ಶನಿವಾರ ಜೆರುಸಲೇಂನಲ್ಲಿ ನಡೆಯಲಿದ್ದ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಅರ್ಜೆಂಟಿನಾದ ಕ್ರೀಡಾ ವೆಬ್ ಸೈಟ್ ಮಿನುಟೊನು ವರದಿ ಮಾಡಿದೆ.
ಜೂನ್ 9ರಂದು ಇಸ್ರೇಲ್ ಹಾಗು ಅರ್ಜೆಂಟಿನಾ ನಡುವೆ ಫುಟ್ಬಾಲ್ ಪಂದ್ಯವು ಜೆರುಸಲೇಂನ ಟೆಡ್ಡಿ ಸ್ಟೇಡಿಯಂನಲ್ಲಿ ನಡೆಯುವುದಾಗಿ ಈ ಹಿಂದೆ ನಿಗದಿಯಾಗಿತ್ತು. ಅರ್ಜೆಂಟಿನಾದ ಈ ನಡೆಯನ್ನು ಫೆಲೆಸ್ತೀನ್ ರಾಜಕೀಯ ನಾಯಕ ಜಿಬ್ರೀಲ್ ರಜಬ್ ಸ್ವಾಗತಿಸಿದ್ದಾರೆ.
Next Story