ರಶ್ಯನ್ ಓಪನ್ : ಸೌರಭ್ ವರ್ಮಾ ಚಾಂಪಿಯನ್
ವ್ಲಾಡಿವೊಸ್ಟೋಕ್ (ರಶ್ಯ), ಜು.29: ಮಾಜಿ ರಾಷ್ಟ್ರೀಯ ಚಾಂಪಿಯನ್ ಸೌರಭ್ ವರ್ಮಾ ಇಲ್ಲಿ ನಡೆದ ರಶ್ಯ ಓಪನ್ ಟೂರ್ 100 ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ರವಿವಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ರಶ್ಯನ್ ಓಪನ್ ಟೂರ್ನಮೆಂಟ್ನ ಪುರುಷರ ವಿಭಾಗದ ಸಿಂಗಲ್ಸ್ನ ಫೈನಲ್ನಲ್ಲಿ ಸೌರಭ್ ವರ್ಮಾ ಅವರು ಜಪಾನ್ನ ಕೋಕಿ ವಾಟಾನಬೆ ವಿರುದ್ಧ 18-21-, 21-12, 21-17 ಅಂತರದಲ್ಲಿ ಜಯ ಗಳಿಸುವ ಮೂಲಕ 52 ಲಕ್ಷ ರೂ. ಮೊತ್ತದ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ಸ್ಫೋರ್ಟ್ಸ್ ಹಾಲ್ ಒಲಿಂಪಿಕ್ಸ್ ನಲ್ಲಿ ಸುಮಾರು 1 ಗಂಟೆ ಕಾಲ ನಡೆದ ಪಂದ್ಯದಲ್ಲಿ ವರ್ಮಾ ಅವರು ನಂ. 119 ವಾಟಾನಬೆ ವಿರುದ್ಧ ಜಯ ಗಳಿಸಿ 2018ರಲ್ಲಿ ಮೊದಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
Next Story