ಮಹಿಳೆಯರ ಹಾಕಿ ವಿಶ್ವಕಪ್; ಭಾರತ ಪ್ಲೇ ಆಫ್ಗೆ ತೇರ್ಗಡೆ
ಲಂಡನ್, ಜು.29: ಮಹಿಳೆಯರ ಹಾಕಿ ವಿಶ್ವಕಪ್ನ ಗ್ರೂಪ್‘ಬಿ’ ಪಂದ್ಯದಲ್ಲಿ ರವಿವಾರ ಅಮೆರಿಕ ವಿರುದ್ಧ 1-1 ಅಂತರದಿಂದ ಡ್ರಾ ಮಾಡಿಕೊಂಡ ಭಾರತ ಪ್ಲೇ ಆಫ್ಗೆ ತೇರ್ಗಡೆಯಾಗಿದೆ.
ಪಾವೋಲಿನೊ 11ನೇ ನಿಮಿಷದಲ್ಲಿ ದಾಖಲಿಸಿದ ಗೋಲು ನೆರವಿನಲ್ಲಿ ಅಮೆರಿಕ ಪಂದ್ಯದ ಮೊದಲಾರ್ಧದಲ್ಲಿ 1-0 ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದ 31ನೇ ನಿಮಿಷದಲ್ಲಿ ಗೋಲು ಬಾರಿಸಿದ ಭಾರತದ ನಾಯಕಿ ರಾಣಿ ರಾಂಪಾಲ್ 1-1 ಸಮಬಲ ಸಾಧಿಸಲು ನೆರವಾದರು.
Next Story