ಲಸಿತ್ ಮಾಲಿಂಗ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಚಿನ್ಮಯಿ ಶ್ರೀಪಾದ
ಮುಂಬೈ , ಅ.11: ಖ್ಯಾತ ತಮಿಳು ಗಾಯಕಿ ಚಿನ್ಮಯಿ ಶ್ರೀಪಾದ ಅವರು ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಾಲಿಂಗ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.
ಚಿನ್ಮಯಿ ಶ್ರೀಪಾದ #MeToo ಅಭಿಯಾನದಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲವು ವರ್ಷಗಳ ಹಿಂದೆ ಮುಂಬೈನ ಹೋಟೆಲ್ ಒಂದರಲ್ಲಿ ನನ್ನ ಗೆಳತಿಯನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಲಸಿತ್ ಮಾಲಿಂಗ ಲೈಂಗಿಕ ಕಿರುಕುಳ ನಡೆಸಿರುವುದಾಗಿ ಆರೋಪಿಸಿದ್ದಾರೆ.
“ಐಪಿಎಲ್ ಪಂದ್ಯ ನಡೆಯುತ್ತಿದ್ದ ಹೋಟೆಲ್ ಸಿಬ್ಬಂದಿ ನಿಮ್ಮ ಗೆಳತಿ ಶ್ರೀಲಂಕಾ ಕ್ರಿಕೆಟರ್ ಲಸಿತ್ ಮಾಲಿಂಗ ಅವರ ರೂಂಗೆ ತೆರಳಿರುವುದಾಗಿ ತಿಳಿಸಿದ್ದರು. ಆದರೆ ನಾನು ಅಲ್ಲಿ ಹೋಗಿ ನೋಡಿದಾಗ ನನ್ನ ಫ್ರೆಂಡ್ ಇರಲಿಲ್ಲ. ಅಲ್ಲಿ ಮಾಲಿಂಗ ದೌರ್ಜನ್ಯ ನಡೆಸಿದರು. ನನಗೆ ಅವಮಾನವಾಗುತ್ತದೆ ಎಂದು ಎಲ್ಲೂ ಈ ವಿಷಯ ಯಾರಿಗೂ ತಿಳಿಸಿರಲಿಲ್ಲ” ಎಂದು ಅವರು ಹೇಳಿದ್ದಾರೆ
Next Story