ದಕ್ಷಿಣ ಆಫ್ರಿಕಕ್ಕೆ ಟ್ವೆಂಟಿ-20 ಸರಣಿ
ಹರಾರೆ, ಅ.14: ರವಿವಾರ ಇಲ್ಲಿ ನಡೆಯಬೇಕಾಗಿದ್ದ ದಕ್ಷಿಣ ಆಫ್ರಿಕ-ಝಿಂಬಾಬ್ವೆ ನಡುವಿನ ಮೂರನೇ ಅಂತರ್ರಾಷ್ಟ್ರೀಯ ಟ್ವೆಂಟಿ-20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಸರಣಿಯ ಮೊದಲೆರಡು ಪಂದ್ಯಗಳನ್ನು ಜಯಿಸಿ 2-0 ಮುನ್ನಡೆ ಸಾಧಿಸಿದ್ದ ದಕ್ಷಿಣ ಆಫ್ರಿಕ ಸರಣಿ ವಶಪಡಿಸಿಕೊಂಡಿದೆ.
ಟ್ವೆಂಟಿ-20 ಸರಣಿಯಲ್ಲಿ ಝಿಂಬಾಬ್ವೆ ಯುವ ಆಟಗಾರ ಬ್ರೆಂಡನ್ ಮವುಟಾ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ದಕ್ಷಿಣ ಆಫ್ರಿಕ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದ್ದರೂ ಬ್ಯಾಟ್ಸ್ ಮನ್ಗಳ ವೈಫಲ್ಯ ತಂಡಕ್ಕೆ ಚಿಂತೆಯಾಗಿ ಪರಿಣಮಿಸಿದೆ. ವಿಶ್ವಕಪ್ ಹತ್ತಿರವಾಗುತ್ತಿರುವ ಕಾರಣ ಈ ಪ್ರಶ್ನೆಗೆ ಬೇಗನೆ ಉತ್ತರ ಕಂಡುಕೊಳ್ಳಬೇಕಾಗಿದೆ.
ದಕ್ಷಿಣ ಆಫ್ರಿಕದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Next Story