ಸೈನಾ ಫೈನಲ್ಗೆ, ಶ್ರೀಕಾಂತ್ಗೆ ಸೋಲು
ಡೆನ್ಮಾರ್ಕ್ ಓಪನ್
ಒಡೆನ್ಸೆ,ಅ.20: ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್ನಲ್ಲಿ ಸೈನಾ ನೆಹ್ವಾಲ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಪುರುಷರ ವಿಭಾಗ ಸಿಂಗಲ್ಸ್ ನಲ್ಲಿ ಭಾರತದ ಕೆ.ಶ್ರೀಕಾಂತ್ ಸೆಮಿಫೈನಲ್ನಲ್ಲಿ ಸೋತು ನಿರ್ಗಮಿಸಿದರು.
ಸೈನಾ ಅವರು ಸೆಮಿಫೈನಲ್ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಇಂಡೋನೇಶ್ಯದ ಗ್ರೇಗೊರಿಯ ಮರಿಸ್ಕಾ ತನ್ಜಂಗ್ರನ್ನು 21-11, 21-12 ಅಂತರದಲ್ಲಿ ಸೋಲಿಸಿ ಫೈನಲ್ ತಲುಪಿದರು. ಕ್ವಾರ್ಟರ್ ಫೈನಲ್ನಲ್ಲಿ ನಂ.10 ಆಟಗಾರ್ತಿ ಭಾರತದ ಸೈನಾ ನೆಹ್ವಾಲ್ ಅವರು ನಂ.7 ಆಟಗಾರ ಜಪಾನ್ನ ನೊರೊಮಿ ಒಕುಹರಾ ವಿರುದ್ಧ 17-21, 21-16, 21-12 ಅಂತರದಲ್ಲಿ ಜಯ ಗಳಿಸಿದ್ದರು.
ವಿಶ್ವದ ನಂ. 6 ಆಟಗಾರ ಶ್ರೀಕಾಂತ್ ಅವರು ಸೆಮಿಫೈನಲ್ನಲ್ಲಿ ಜಪಾನ್ನ ಕೆಂಟೊ ಮೊಮೊಟಾ ವಿರುದ್ಧ 16-21, 12-21 ಅಂತರದಲ್ಲಿ ಸೋಲು ಅನುಭವಿಸಿದರು. ಶ್ರೀಕಾಂತ್ ಅವರು ನಂ.23 ಆಟಗಾರ ಭಾರತದ ಸಮೀರ್ ವರ್ಮಾ ವಿರುದ್ಧ 22-20, 19-21, 23-21 ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್ನಲ್ಲಿ ಅವಕಾಶ ದೃಢಪಡಿಸಿದ್ದರು. ಮಹಿಳೆಯರ ಡಬಲ್ಸ್ನಲ್ಲಿ ಅಶ್ವಿನ್ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಕ್ವಾರ್ಟರ್ ಫೈನಲ್ನಲ್ಲಿ ಯುಕಿ ಫುಕುಶಿಮಾ ಮತ್ತು ಸಾಯಕಾ ಹಿರೊಟಾ ಎದುರು ಸೋಲು ಅನುಭವಿಸಿ ಅಭಿಯಾನ ಕೊನೆಗೊಳಿಸಿದರು.