ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ : ಪಾಕ್ ಗೆ ಸೋಲುಣಿಸಿದ ಭಾರತ
ಮಸ್ಕತ್ , ಅ.21:ಪುರುಷರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಪಂದ್ಯದಲ್ಲಿ ಶನಿವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 3-1 ಅಂತರದಲ್ಲಿ ಜಯ ಗಳಿಸಿದೆ.
ಮೊದಲ ಪಂದ್ಯದಲ್ಲಿ ಓಮನ್ ವಿರುದ್ಧ 11-0 ಅಂತರದಲ್ಲಿ ಜಯ ಗಳಿಸಿದ್ದ ಭಾರತ ಇದೀಗ ಎರಡನೇ ಜಯ ಗಳಿಸಿದೆ.
ಪಾಕಿಸ್ತಾನ ತಂಡ ಪಂದ್ಯದ ಮೊದಲ ನಿಮಿಷದಲ್ಲಿ ಗೋಲು ಖಾತೆ ತೆರೆದು ಭಾರತಕ್ಕೆ ಆಘಾತ ನೀಡಿದ್ದರೂ ಭಾರತದ ನಾಯಕ ಮನ್ ಪ್ರೀತ್ ಸಿಂಗ್ (24ನೇ ನಿಮಿಷ), ಮನ್ ದೀಪ್ ಸಿಂಗ್ (32ನೇ ನಿ) ಮತ್ತು ದಿಲ್ ಪ್ರೀತ್ ಸಿಂಗ್ (42ನೇ ನಿ.) ಗೋಲು ದಾಖಲಿಸಿ ತಂಡದ ಗೆಲುವಿಗೆ ನೆರವಾದರು.
ಪಾಕಿಸ್ತಾನದ ಮುಹಮ್ಮದ್ ಇರ್ಫಾನ್ (1ನೇ ನಿ.) ಏಕೈಕ ಗೋಲು ದಾಖಲಿಸಿದರು.
Next Story