ಡಬ್ಲುಟಿಎ ಫೈನಲ್ಸ್: ಬೆರ್ಟೆನ್ಸ್ ಸೆಮಿ ಫೆನಲ್ಗೆ
ಸಿಂಗಾಪುರ, ಅ.26: ಹಾಲೆಂಡ್ ಆಟಗಾರ್ತಿ ಕಿಕಿ ಬೆರ್ಟೆನ್ಸ್ ಡಬ್ಲುಟಿಎ ಫೈನಲ್ಸ್ ಟೆನಿಸ್ ಟೂರ್ನಮೆಂಟ್ನಲ್ಲಿ ಸೆಮಿ ಫೈನಲ್ಗೆ ತೇರ್ಗಡೆಯಾಗಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ನ ಕೊನೆಯ ರೌಂಡ್ ರಾಬಿನ್ ಪಂದ್ಯದಲ್ಲಿ ಬೆರ್ಟೆನ್ಸ್ ಎದುರಾಳಿ ಜಪಾನ್ನ ನಯೊಮಿ ಒಸಾಕಾ ಸ್ನಾಯು ಸೆಳೆತದಿಂದ ಗಾಯಗೊಂಡು ನಿವೃತ್ತಿಯಾದರು.
ಯುಎಸ್ ಓಪನ್ ಚಾಂಪಿಯನ್ ಒಸಾಕಾ ತನ್ನ ಕಾಲಿನ ಹಿಂಬದಿ ಟೇಪ್ ಧರಿಸಿಕೊಂಡು ಸ್ಪರ್ಧಾಕಣಕ್ಕಿಳಿದಿದ್ದರು. ಮೊದಲ ಸೆಟ್ನ ಅಂತ್ಯದಲ್ಲಿ ಒಸಾಕಾ ಪಂದ್ಯದಿಂದ ಹಿಂದೆ ಸರಿದರು. ಬೆರ್ಟೆನ್ಸ್ ಮೊದಲ ಸೆಟನ್ನು 6-3 ಅಂತರದಿಂದ ಜಯಿಸಿದರು. ಬೆರ್ಟೆನ್ಸ್ ಸೆಮಿ ಫೈನಲ್ನಲ್ಲಿ ಜರ್ಮನಿಯ ಕೆರ್ಬರ್ ಅಥವಾ ಅಮೆರಿಕದ ಸ್ಲೊಯಾನೆ ಸ್ಟೀಫನ್ಸ್ರನ್ನು ಸೇರ್ಪಡೆಯಾಗಲಿದ್ದಾರೆ. ಈ ಇಬ್ಬರು ರೆಡ್ ಗ್ರೂಪ್ನಲ್ಲಿ ಆಡಲಿದ್ದಾರೆ.
Next Story