63ನೇ ಬಾರಿ ಅಂತಿಮ-16ಕ್ಕೆ ಫೆಡರರ್ ಪ್ರವೇಶ
ಆಸ್ಟ್ರೇಲಿಯನ್ ಓಪನ್
ಹಾಲಿ ಚಾಂಪಿಯನ್ ರೋಜರ್ ಫೆಡರರ್ ಆಸ್ಟ್ರೇಲಿಯನ್ ಓಪನ್ನ ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಯುವ ಆಟಗಾರ ಟೇಲರ್ ಫ್ರಿಟ್ಝ್ ರನ್ನು 6-2, 7-5, 6-2 ಸೆಟ್ಗಳ ಅಂತರದಿಂದ ಮಣಿಸಿ ಅಂತಿಮ-16ರ ಸುತ್ತಿಗೆ ಪ್ರವೇಶಿಸಿದ್ದಾರೆ.
ರಾಡ್ ರೋವರ್ ಅರೆನಾದಲ್ಲಿ 100ನೇ ಪಂದ್ಯವನ್ನು ಆಡಿದ ಸ್ವಿಸ್ ಸೂಪರ್ಸ್ಟಾರ್ ಫೆಡರರ್ ಈ ಟೂರ್ನಿಯಲ್ಲಿ 97ನೇ ಜಯ ದಾಖಲಿಸಿದರು. ಮಾತ್ರವಲ್ಲ 88 ನಿಮಿಷಗಳಲ್ಲಿ 21ರ ಹರೆಯದ ಆಟಗಾರನನ್ನು ಮಣಿಸಿ ಗ್ರಾನ್ಸ್ಲಾಮ್ ಟೂರ್ನಿಯಲ್ಲಿ 63ನೇ ಬಾರಿ ಪ್ರಿ-ಕ್ವಾರ್ಟರ್ ಫೈನಲ್ಗೆ ತಲುಪಿದ ಸಾಧನೆ ಮಾಡಿದರು. ದಾಖಲೆ 7ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ರೇಸ್ನಲ್ಲಿರುವ 20 ಬಾರಿಯ ಗ್ರಾನ್ಸ್ಲಾಮ್ ಚಾಂಪಿಯನ್ ಫೆಡರರ್ ಅಂತಿಮ-16ರ ಸುತ್ತಿನಲ್ಲಿ ಗ್ರೀಕ್ನ ಸ್ಟೆಫಿನಾಸ್ ಸಿಟ್ಸಿಪಾಸ್ರನ್ನು ಎದುರಿಸಲಿದ್ದಾರೆ. ಇದೇ ವೇಳೆ, ಅಮೆರಿಕದ ಯುವ ಆಟಗಾರ ಇಟಲಿಯ ಹಿರಿಯ ಆಟಗಾರ ಆ್ಯಂಡ್ರಿಯಸ್ ಸೆಪ್ಪಿ ಅವರನ್ನು 6-7(3), 6-3, 4-6, 6-4, 6-3 ಸೆಟ್ಗಳ ಅಂತರದಿಂದ ಸೋಲಿಸಿ ಟೂರ್ನಿಯಲ್ಲಿ 4ನೇ ಸುತ್ತಿಗೆ ತಲುಪಿದರು.
Next Story