ಝಿಂಬಾಬ್ವೆ ಕ್ರಿಕೆಟ್ ಮಂಡಳಿ ಅಮಾನತು
ಹರಾರೆ, ಜೂ.22: ಭ್ರಷ್ಟಾಚಾರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಝಿಂಬಾಬ್ವೆ ಸರಕಾರ ಝಿಂಬಾಬ್ವೆ ಕ್ರಿಕೆಟ್ ಮಂಡಳಿಯನ್ನು ಅಮಾನತುಗೊಳಿಸಿದೆ. ತನಿಖೆ ನಡೆಸುವ ತನಕ ಝಿಂಬಾಬ್ವೆ ಕ್ರಿಕೆಟ್ ನಾಯಕತ್ವ ಸ್ಥಾನಗಳಿಗೆ ಚುನಾವಣೆ ನಡೆಸಬಾರದು ಎಂದು ಕಳೆದ ವಾರ ಕ್ರೀಡೆ ಹಾಗೂ ಮನರಂಜನಾ ಆಯೋಗ(ಎಸ್ಆರ್ಸಿ) ಆದೇಶ ಹೊರಡಿಸಿತ್ತು. ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನಿಂದ ಸ್ವೀಕರಿಸಿರುವ ಹಣ ಸೇರಿದಂತೆ ಇತರ ಹಣವನ್ನು ದುರುಪಯೋಗ ಹಾಗೂ ವಂಚನೆಗೆ ಸಂಬಂಧಿಸಿ ತನಿಖೆ ನಡೆಯಲಿದೆ ಎಂದು ಕ್ರೀಡೆ ಹಾಗೂ ಮನರಂಜನಾ ಆಯೋಗ ಝಿಂಬಾಬ್ವೆ ಕ್ರಿಕೆಟ್ ಅಧಿಕಾರಿಗಳಿಗೆ ತಿಳಿಸಿದೆ.
ಮಾಜಿ ಝಿಂಬಾಬ್ವೆ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಗೂ ಸಿಇಒ ಡೇವ್ ಎಲ್ಮನ್ಬ್ರೌನ್ರನ್ನು ಝಿಂಬಾಬ್ವೆ ಕ್ರಿಕೆಟ್ ಆಡಳಿತವನ್ನು ನೋಡಿಕೊಳ್ಳಲಿರುವ ಹಂಗಾಮಿ ಸಮಿತಿಯ ಅಧ್ಯಕ್ಷರನ್ನಾಗಿ ಎಸ್ಆರ್ಸಿ ನೇಮಕ ಮಾಡಿದೆ.
Next Story