ವಿಶ್ವಕಪ್: ವೆಸ್ಟ್ಇಂಡೀಸ್ 311/6
ಲೀಡ್ಸ್, ಜು.4: ಅಗ್ರ ಸರದಿಯ ದಾಂಡಿಗರಾದ ಶೈ ಹೋಪ್(77,92 ಎಸೆತ), ಲೂವಿಸ್(58,78 ಎಸೆತ) ಹಾಗೂ ಪೂರನ್(58,43 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ವೆಸ್ಟ್ಇಂಡೀಸ್ ತಂಡ ಅಫ್ಘಾನಿಸ್ತಾನ ವಿರುದ್ಧ ವಿಶ್ವಕಪ್ನ 42ನೇ ಪಂದ್ಯದಲ್ಲಿ 50 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 311 ರನ್ ಗಳಿಸಿದೆ.
ಟಾಸ್ ಜಯಿಸಿದ ವೆಸ್ಟ್ಇಂಡೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕ ಹೋಲ್ಡರ್(45) ಹಾಗೂ ಹೆಟ್ಮೆಯರ್(39)ಎರಡಂಕೆಯ ಸ್ಕೋರ್ ಗಳಿಸಿದರು.
ಅಫ್ಘಾನ್ ಪರ ಝದ್ರಾನ್(2-73)ಯಶಸ್ವಿ ಬೌಲರ್ ಎನಿಸಿಕೊಂಡರು.
ಉಭಯ ತಂಡಗಳು ವಿಶ್ವಕಪ್ನ ಸೆಮಿ ಫೈನಲ್ ರೇಸ್ನಿಂದ ಹೊರಗುಳಿದಿದ್ದು, ಕೇವಲ ಪ್ರತಿಷ್ಠೆಗಾಗಿ ಆಡುತ್ತಿವೆ.
Next Story