ವಿಶ್ವಕಪ್: ಭಾರತದ ಗೆಲುವಿಗೆ 265 ರನ್ಗಳ ಸವಾಲು
ಮಾಥ್ಯೂಸ್ ಶತಕ
ಲೀಡ್ಸ್, ಜು.6: ಶ್ರೀಲಂಕಾ ವಿರುದ್ಧ ವಿಶ್ವಕಪ್ನ 44ನೇ ಹಾಗೂ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಗೆಲುವಿಗೆ 265 ರನ್ಗಳ ಗೆಲುವಿನ ಸವಾಲನ್ನು ಪಡೆದಿದೆ.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಅವರ ಆಕರ್ಷಕ ಶತಕದ ನೆರವಿನಲ್ಲಿ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 264ರನ್ ಗಳಿಸಿದೆ.
ಮಾಥ್ಯೂಸ್ 113 ರನ್(128ಎ, 10ಬೌ,1ಸಿ) ಗಳಿಸಿ ಔಟಾದರು.
ಮ್ಯಾಥ್ಯೂಸ್ ತನ್ನ 211ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮೂರನೇ ಶತಕ ಸಿಡಿಸಿದರು. ಅವರು 113 ರನ್ ಗಳಿಸಿ ಔಟಾದರು. ಲಹಿರು ತಿರಿಮನ್ನೆ (53) ಅರ್ಧಶತಕ ಗಳಿಸಿದರು.
ಜಸ್ಪ್ರೀತ್ ಬುಮ್ರಾ ದಾಳಿಗೆ ಸಿಲುಕಿ ಶ್ರೀಲಂಕಾ 11.4 ಓವರ್ಗಳಲ್ಲಿ 55ಕ್ಕೆ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದಾಗ ಮ್ಯಾಥ್ಯೂಸ್ ಮತ್ತು ತಿರಿಮನ್ನೆ 5ನೇ ವಿಕೆಟ್ಗೆ 124 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ಭಾರತದ ಬುಮ್ರಾ 37ಕ್ಕೆ 3 ವಿಕೆಟ್ ಪಡೆದರು.
Next Story