ಖ್ಯಾತ ಫುಟ್ಬಾಲ್ ತಾರೆ ನೇಮರ್ ಗೆ ದೇಶದ ತಂಡದಲ್ಲಿ ಸ್ಥಾನವಿಲ್ಲ !
ರಿಯೊ ಡಿ ಜನೈರೊ , ಮೇ 6: ವಿಶ್ವವಿಖ್ಯಾತ ಫುಟ್ಬಾಲ್ ತಾರೆ, ಬಾರ್ಸಿಲೋನ ಕ್ಲಬ್ ನ ಸ್ಟಾರ್ ಆಟಗಾರ ನೇಮರ್ ಕೋಪ ಅಮೇರಿಕ ಟೂರ್ನಿಗೆ ಹೋಗುವ ತಮ್ಮ ದೇಶ ಬ್ರೆಝಿಲ್ ತಂಡದಲ್ಲಿ ಸ್ಥಾನ ಪಡೆದಿಲ್ಲ !
ಈ ಟೂರ್ನಿ ಮುಂದಿನ ತಿಂಗಳು ನಡೆಯಲಿದೆ. ಬ್ರೆಝಿಲ್ ನ ಅತ್ಯಂತ ಖ್ಯಾತ ಆಟಗಾರ ನೇಮರ್ ತಮ್ಮ ದೇಶದ ತಂಡದಲ್ಲಿ ಇಲ್ಲದಿರಲು ಕಾರಣ ಇಷ್ಟೇ. ನೇಮರ್ ಆಡುವ ಬಾರ್ಸಿಲೋನ ಕ್ಲಬ್ ಬ್ರೆಝಿಲ್ ಕೋಚ್ ಡುಂಗಾ ಅವರಲ್ಲಿ ಒಂದು ಮನವಿ ಮಾಡಿತ್ತು. ಅದೇನೆಂದರೆ, ಒಂದೋ ಕೋಪ ಅಮೆರಿಕಕ್ಕೆ ನೇಮರ್ ರನ್ನು ಆಡಿಸಿ ಇಲ್ಲವೇ ಆಗಸ್ಟ್ ನಲ್ಲಿ ಬ್ರೆಝಿಲ್ ನಲ್ಲೇ ನಡೆಯುವ ಒಲಿಂಪಿಕ್ಸ್ ನಲ್ಲಿ ಆಡಿಸಿ. ಇಲ್ಲದಿದ್ದರೆ ಅವರು ನಮಗೆ ಎರಡೂ ಸಂದರ್ಭದಲ್ಲಿ ಅಲಭ್ಯರಾಗುತ್ತಾರೆ ಎಂದು ಕೇಳಿಕೊಂಡಿತ್ತು.
ಇದಕ್ಕೆ ಒಪ್ಪಿದ ಡುಂಗಾ ಒಲಿಂಪಿಕ್ಸ್ ನಲ್ಲೇ ನೇಮರ್ ದೇಶದ ತಂಡಕ್ಕಿರಲಿ ಎಂದು ಈಗ ಬಿಟ್ಟು ಕೊಟ್ಟಿದ್ದಾರೆ.
Next Story