ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್ : ಸತತ ಎರಡನೇ ಚಿನ್ನ ಗೆದ್ದ ದ್ಯುತಿ ಚಂದ್
ಭುವನೇಶ್ವರ,ಮಾ.1: ಖೇಲೊ ಇಂಡಿಯಾ ಯುನಿವಸಿಟಿರ್ ಗೇಮ್ಸ್ನಲ್ಲಿ ದ್ಯುತಿ ಚಂದ್ ಎರಡನೇ ಚಿನ್ನ ತನ್ನದಾಗಿಸಿಕೊಂಡರು. ರವಿವಾರ ಅವರು 200 ಮೀ. ಓಟದ ಸ್ಪರ್ಧೆಯಲ್ಲಿ 23.66ರ ಸೆಕೆಂಡ್ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು.
ದ್ಯುತಿ ಸತತ ಎರಡನೇ ದಿನ ಎರಡನೇ ಚಿನ್ನದ ಪದಕ ಜಯಿಸಿದರು. ಶನಿವಾರ ನೂತನ ರಾಷ್ಟ್ರೀಯ ಯುನಿವರ್ಸಿಟಿ ದಾಖಲೆಯೊಂದಿಗೆ 100 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.
‘100 ಮೀ. ಓಟದಲ್ಲಿ ವೇಗವನ್ನು ಹೆಚ್ಚಿಸಲು ಇಲ್ಲವೇ ಕಡಿಮೆಗೊಳಿಸಲು ಸಮಯ ಇರುವುದಿಲ್ಲ. ಆದರೆ, 200 ಮೀ.ಓಟದಲ್ಲಿ ನಿರಾಳವಾಗಲು ಸಾಕಷ್ಟು ಸಮಯ ಸಿಗುತ್ತದೆ’’ ಎಂದು 100 ಹಾಗೂ 200 ಮೀ. ಓಟದ ಸ್ಪರ್ಧೆಯ ವ್ಯತ್ಯಾಸದ ಕುರಿತು ಚಂದ್ ಪ್ರತಿಕ್ರಿಯಿಸಿದರು. 2018ರಲ್ಲಿ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್ನಲ್ಲಿ 200 ಮೀ. ಓಟದ ಸ್ಪರ್ಧೆಯಲ್ಲಿ ದ್ಯುತಿ ಶ್ರೇಷ್ಠ ನಿರ್ವಹಣೆ ನೀಡಿದ್ದರು. ಗೇಮ್ಸ್ನಲ್ಲಿ 23.20 ಸೆಕೆಂಡ್ನಲ್ಲಿ ಗುರಿ ಮುಟ್ಟಿದ್ದ ಅವರು ಬೆಳ್ಳಿ ಪದಕ ಜಯಸಿದ್ದರು.
Next Story