ಕಾಲು ನೋವಿನಿಂದಾಗಿ ತರಬೇತಿ ಶಿಬಿರದಿಂದ ರೊನಾಲ್ಡೊ ದೂರ
ಲಿಸ್ಬನ್, ಸೆ.3: ಕ್ರೊಯೇಷಿಯಾ ಮತ್ತು ಸ್ವೀಡನ್ ವಿರುದ್ಧದ ನೇಷನ್ಸ್ ಲೀಗ್ ಪಂದ್ಯಗಳಿಗಾಗಿ ಇಲ್ಲಿ ಏರ್ಪಡಿಸಲಾದ ಎರಡನೇ ತರಬೇತಿ ಶಿಬಿರಕ್ಕೂ ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಲಭ್ಯರಿಲ್ಲ.
ಕಾಲು ನೋವು ಸಮಸ್ಯೆಯಿಂದಾಗಿ ಕ್ರಿಸ್ಟಿಯಾನೊ ರೊನಾಲ್ಡೊ ಗುರುವಾರ ನಡೆಯಲಿರುವ ಪೋರ್ಚುಗಲ್ ತಂಡದ ಎರಡನೇ ತರಬೇತಿ ಶಿಬಿರದಿಂದ ದೂರ ಉಳಿಯಲಿದ್ದಾರೆ.
35ರ ಹರೆಯದ ರೊನಾಲ್ಡೊ ಬುಧವಾರ ಜಿಮ್ ಸೆಷನ್ನಲ್ಲಿ ಪಾಲ್ಗೊಂಡಿದ್ದರು. ಕಳೆದ ವರ್ಷ ಮೊದಲ ಆವೃತ್ತಿಯ ಲೀಗ್ನಲ್ಲಿ ಯುರೋಪಿಯನ್ ಚಾಂಪಿಯನ್ ಪೋರ್ಚುಗಲ್ ತಂಡ ಜಯಗಳಿಸಿತ್ತು. ಪೋರ್ಟೊದಲ್ಲಿ ನಡೆದ ಫೈನಲ್ನಲ್ಲಿ ನೆದರ್ಲ್ಯಾಂಡ್ ತಂಡವನ್ನು 1-0 ಅಂತರದಲ್ಲಿ ಮಣಿಸಿದ ಪೋರ್ಚುಗಲ್ ಪ್ರಶಸ್ತಿಯನ್ನು ಬಾಚಿಕೊಂಡಿತ್ತು.
Next Story