ದೀಪಕ್ ಪೂನಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್
ಹೊಸದಿಲ್ಲಿ, ಸೆ.6: ಕೊರೋನ ವೈರಸ್ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಜಯಿಸಿದ ಕುಸ್ತಿಪಟು ದೀಪಕ್ ಪೂನಿಯಾ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ರಾಷ್ಟ್ರೀಯ ಶಿಬಿರಕ್ಕೆ ಆಗಮಿಸಿದ್ದ ಪೂನಿಯಾ ಅವರನ್ನು ಕೋವಿಡ್ -19 ಪರೀಕ್ಷೆಗೊಳಪಡಿಸಿದಾಗ ಅವರಿಗೆ ಸೋಂಕು ತಗಲಿರುವುದು ದೃಢಪಟ್ಟಿತ್ತು. ಇದೀಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಪೂನಿಯಾರಿಗೆ ಮನೆಯಲ್ಲಿ ಐಸೋಲೇಶನ್ನಲ್ಲಿರಲು ಸಲಹೆ ನೀಡಲಾಗಿದೆ.
Next Story